ದ್ವಿತೀಯ ಪಿಯುಸಿ ಪರೀಕ್ಷೆ: ಅಪ್ರತಿಮ ಸಾಧನೆ ಮಾಡಿದ ಆಳ್ವಾಸ್-ದಿಶಾ ರಾಜ್ಯಕ್ಕೆ ಪ್ರಥಮ ರ‍್ಯಾಂಕ್, ವಿಜ್ಞಾನ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿ ದ್ವಿತೀಯ ರ‍್ಯಾಂಕ್

ದ್ವಿತೀಯ ಪಿಯುಸಿ ಪರೀಕ್ಷೆ: ಅಪ್ರತಿಮ ಸಾಧನೆ ಮಾಡಿದ ಆಳ್ವಾಸ್-ದಿಶಾ ರಾಜ್ಯಕ್ಕೆ ಪ್ರಥಮ ರ‍್ಯಾಂಕ್, ವಿಜ್ಞಾನ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿ ದ್ವಿತೀಯ ರ‍್ಯಾಂಕ್


ಮೂಡುಬಿದಿರೆ: 2026 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಅಪ್ರತಿಮ ಸಾಧನೆಯೊಂದಿಗೆ  ಶೈಕ್ಷಣಿಕ ಮೇಲುಗೈಯನ್ನು  ಸಾಬೀತುಪಡಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈ ಹಿಂದೆ ಅನನ್ಯ ಕೆ, 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು, ದ್ವಿತೀಯ ಪಿಯು ಫಲಿತಾಂಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಾಧನೆ ಮೆರೆದಿದ್ದಳು.ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಮಂಜುನಾಥ್ ಎಸ್ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ, 


ಈ ವರ್ಷದ ಫಲಿತಾಂಶದಲ್ಲಿ 95 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. 687 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ, 1557 ವಿದ್ಯಾರ್ಥಿಗಳು ಶೇ.90 ಕ್ಕಿಂತ ಅಧಿಕ, 1892 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು (ಡಿಸ್ಟಿಂಕ್ಷನ್) ಅಂಕಗಳನ್ನು ಗಳಿಸಿದ್ದಾರೆ. 285 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪಲ್ಲವಿ ಕೆ. ಸಿ 597, ಅಂಕಿತಾ ಬಸಪ್ಪ ಕೊನ್ನೂರ 596, ದಿಶಾ ಎಚ್ ಶೆಟ್ಟಿ 596, ಜ್ಞಾನಶ್ರೀ ಡಿ ಅರಳ 596 ,ಆದರ್ಶ್ ಬಾಲಚಂದ್ರ ಹೆಗಡೆ 596, ಲಿಜ್ವಿತಾ ವರ್ಜೀನಿಯಾ ಡಿ ಮೆಲ್ಲೋ 596, ನೇಹಾ ಪಿ ಕಕರಡ್ಡಿ 596, ಐಶ್ವರ್ಯ 595, ಮಾನವಿ ಡಿ ಎಸ್ 595, ನಿರಾಳಿ ಹೆಗ್ಗರ್ 595, ಜಶ್ ಕಾವೇರಿಯಪ್ಪ ಎ. ಎಂ 595, ವೈಷ್ಣವಿ ರಾವ್ 595, ಅಕ್ಷಯಕುಮಾರ್ ಸೋಮಶೇಖರ ಗುಗ್ಗಾರಿ 595 ಅಂಕವನ್ನು ಪಡೆದಿದ್ದಾರೆ. 

ಗಣಿತ ವಿಷಯದಲ್ಲಿ 199, ಸಂಸ್ಕೃತ -122, ಬಿಸಿನೆಸ್ ಸ್ಟಡೀಸ್-86, ಕಂಪ್ಯೂಟರ್ ಸೈನ್ಸ್ -86, ಭೌತಶಾಶ್ತç-85, ಕನ್ನಡ-82, ಬೇಸಿಕ್ ಮ್ಯಾತ್ಸ್- 54, ಅಕೌಂಟೆನ್ಸಿ-53, ಜೀವಶಾಸ್ತç-49, ಸಂಖ್ಯಾಶಾಸ್ತç-45, ಅರ್ಥಶಾಸ್ತç-36, ರಸಾಯನಶಾಸ್ತç-21, ಹಿಂದಿ-13, ಎಲೆಕ್ಟಾçನಿಕ್ಸ್-6, ಇಂಗ್ಲೀಷ್-3, ಸಮಾಜಶಾಸ್ತç-2, ರಾಜ್ಯಶಾಸ್ತç-1, ಅರೇಬಿಕ್-1 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

6 ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳನ್ನು ಒರ್ವ ವಿದ್ಯಾರ್ಥಿ, 5 ವಿಷಯಗಳಲ್ಲಿ 4, 4 ವಿಷಯಗಳಲ್ಲಿ 20, 3 ವಿಷಯಗಳಲ್ಲಿ 66, 2 ವಿಷಯದಲ್ಲಿ 147, ಒಂದು ವಿಷಯದಲ್ಲಿ 481 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿಎನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಕಲಾ ನಿಖಾಯದ ವೇಣುಗೋಪಾಲ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.


ದಿಶಾಗೆ ಉಚಿತ ಶಿಕ್ಷಣ ಮತ್ತು 3 ಲಕ್ಷ ನಗದು: ಡಾ. ಎಂ. ಮೋಹನ್ ಆಳ್ವ ಘೋಷಣೆ

ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ  ವಿದ್ಯಾಥಿ೯ನಿ ಮೂಡುಬಿದಿರೆಯ ದಿಶಾನ ಮುಂದಿನ ಸಿ.ಎಶಿಕ್ಷಣವನ್ನು ಸಂಪೂಣ೯ವಾಗಿ ಉಚಿತವಾಗಿ ನೀಡಲಾಗುವುದು ಹಾಗೂ ರೂ.3ಲಕ್ಷ ನಗದನ್ನು ನೀಡುವುದಾಗಿ ಘೋಷಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article