ದ್ವಿತೀಯ ಪಿಯು ಪರೀಕ್ಷೆ: ತೆಂಕಮಿಜಾರು ಸರಕಾರಿ ಪ.ಪೂ. ಕಾಲೇಜಿಗೆ ಶೇ.94 ಫಲಿತಾಂಶ

ದ್ವಿತೀಯ ಪಿಯು ಪರೀಕ್ಷೆ: ತೆಂಕಮಿಜಾರು ಸರಕಾರಿ ಪ.ಪೂ. ಕಾಲೇಜಿಗೆ ಶೇ.94 ಫಲಿತಾಂಶ


ಮೂಡುಬಿದಿರೆ: 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೆಂಕಮಿಜಾರು ಪ.ಪೂ. ಕಾಲೇಜು ಶೇ 94 ಫಲಿತಾಂಶವನ್ನು ದಾಖಲಿಸಿದೆ. 

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 38 ವಿದ್ಯಾಥಿ೯ಗಳಲ್ಲಿ 11 ಮಂದಿ ಡಿಸ್ಟಿಂಕ್ಷನ್, 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಶ್ರೀಶಾನ್ (561), ಮಂಜುಶ್ರೀ (550), ಮುಸ್ತಾಫಾ (548)  ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ  35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡಾ 97.14 ಪಲಿತಾಂಶವನ್ನು ದಾಖಲಿಸಿದ್ದಾರೆ.

ಮಹಮ್ಮದ್ ಆಶಿಕ್ (563), ಐಫಾ (558), ದೀಪ್ತಿ ಕುಮಾರಿ (549) ಅಂಕಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶೇಕಡಾ 77.27 ಫಲಿತಾಂಶ ದಾಖಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article