ಶಿಕ್ಷಣದ ಜತೆಗೆ ಕಲೆಯನ್ನು ಬೆಳೆಸಿಕೊಳ್ಳಿ: ಪ್ರಸನ್ನ ಶೆಟ್ಟಿ ಬೈಲೂರು

ಶಿಕ್ಷಣದ ಜತೆಗೆ ಕಲೆಯನ್ನು ಬೆಳೆಸಿಕೊಳ್ಳಿ: ಪ್ರಸನ್ನ ಶೆಟ್ಟಿ ಬೈಲೂರು

ಮೂಡುಬಿದಿರೆ ಶ್ರೀ ಧವಲಾ ಕಾಲೇಜಿನಲ್ಲಿ 'ಧವಲಾ ಸಿರಿ-2026' ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

ಮೂಡುಬಿದಿರೆ: ಶಿಕ್ಷಣ ಪ್ರತಿಯೊಬ್ಬರಿಗೂ ಬೇಕು. ಪ್ರತಿಯೊಬ್ಬ ವಿದ್ಯಾಥಿ೯ಯಲ್ಲೂ ಒಬ್ಬ ಕಲಾವಿದನಿರುತ್ತಾನೆ ಆದ್ದರಿಂದ ವಿದ್ಯಾಥಿ೯ಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿನೆಮಾ ನಟ ಹಾಗೂ ಸಂಭಾಷಣಕಾರ ಪ್ರಸನ್ನ ಶೆಟ್ಟಿ ಬೈಲೂರು ಹೇಳಿದರು. 

ಅವರು ಶ್ರೀ ಧವಲಾ ಕಾಲೇಜಿನಲ್ಲಿ ಲಲಿತಕಲಾ ಸಂಘದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ 'ಧವಲಾ ಸಿರಿ - 2026' ಅನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಸಾಂಸ್ಕೃತಿಕ ಹಬ್ಬ ಸಹಕಾರಿಯಾಗಲಿದೆ ಎಂದರು.

ಡಿಜೆವಿವಿ ಸಂಘದ ಕಾಯ೯ದಶಿ೯ ಅಭಿಜಿತ್ ಎಂ. ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ: ಇದೇ ಸಂದಭ೯ದಲ್ಲಿ ಕಲಾವಿದ ಪ್ರಸನ್ನ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 

ಉದ್ಯಮಿಗಳಾದ ಬೆನೆಡಿಕ್ಟಾ ಸೆರ್ರ, ವಿಶ್ರಾಂತ ಪ್ರಾಂಶುಪಾಲ ಅಜಿತ್ ಪ್ರಸಾದ್ ಜೈನ್, ಪ್ರದೀಪ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾಥಿ೯ ನಾಯಕ ಸುಶಾಂತ್, ಜತೆ ಕಾಯ೯ದಶಿ೯ ಸೃಜನ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಪಾಶ್ವ೯ನಾಥ ಅಜ್ರಿ ಸ್ವಾಗತಿಸಿದರು. ಕಾಯ೯ಕ್ರಮದ ಸಂಯೋಜಕಿ ಮಲ್ಲಿಕಾ ರಾವ್ ಪ್ರಸನ್ನ ಶೆಟ್ಟಿ ಅವರನ್ನು ಪರಿಚಯಿಸಿದರು. ವೀಕ್ಷಿತಾ ಮತ್ತು ಶ್ರೇಯ ಕಾಯ೯ಕ್ರಮ ನಿರೂಪಿಸಿದರು. ಲಲಿತಾ ಕಲಾ ಸಂಘದ ಕಾಯ೯ದಶಿ೯ ಪ್ರಜ್ವಲ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article