ವಾಹನ ಢಿಕ್ಕಿಯಾಗಿ ವಾನರ ಮೃತ್ಯು
Monday, May 25, 2026
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಮರಹರಿ ಪರ್ವತದ ಬಳಿ ಸಂಭವಿಸಿದ ಅಪಘಾತವೊಂದರಲ್ಲಿ ವಾನರವೊಂದು ಮೃತಪಟ್ಟ ಹೃದಯವಿದ್ರಾವಿಕ ಘಟನೆ ನಡೆದಿದೆ.
ಅಪಘಾತದಿಂದ ಗಂಭೀರ ಗಾಯಗೊಂಡ ವಾನರನ ಜೀವ ಉಳಿಸುವ ನಿಟ್ಟಿನಲ್ಲಿ ಸ್ಥಳೀಯರು ಹಾಗೂ ಕಲ್ಲಡ್ಕ ಪ್ರಖಂಡ ಬಜರಂಗದಳದ ಕಾರ್ಯಕರ್ತರು ಸಾಕಷ್ಟು ಪ್ರಯತ್ನಪಟ್ಟರೂ ಫಲಕಾರಿಯಾಗಲಿಲ್ಲ.
ಬಳಿಕ ಲೋಹಿತ್ ಪಣೋಲಿಬೈಲು ಅವರ ನೇತೃತ್ವದಲ್ಲಿ ನರಹರಿ ಬೆಟ್ಟದಲ್ಲಿ ಮೃತ ವಾನರನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.