ಮರ ತಲೆಗೆ ಬಿದ್ದು ಕಾರ್ಮಿಕ ಸಾವು
Monday, May 25, 2026
ಬಂಟ್ವಾಳ: ಅಡಿಕೆ ತೋಟದಲ್ಲಿ ಮರಕಡಿಯುವ ವೇಳೆ ತಲೆಗೆ ಮರ ಬಿದ್ದು ಕಾರ್ಮಿಕನೊರ್ವ ಮೃತ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯ್ಲ ಗ್ರಾಮದಲ್ಲಿ ನಡೆದಿದೆ.
ಮೋನಪ್ಪ ಶೆಟ್ಟಿಗಾರ್ (66) ಮೃತಪಟ್ಟವರೆಂದು ಗುರುತಿಸಲಾಗಿದೆ.
ಕೊಯ್ಲ ಗ್ರಾಮದ ಮುಳಿಯ ಎಂಬಲ್ಲಿನ ಸಿಪ್ರಿಯಾನ್ ಲೋಬೋರವರ ಮನೆಯಲ್ಲಿ ತೋಟದಲ್ಲಿ ಅಡಿಕೆ ಮರ ಕಡಿದು ಎಳೆಯುತ್ರಿದ್ದ ವೇಳೆ ಆಕಸ್ಮಿಕವಾಗಿ ಮರ ಅವರ ತಲೆಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.