ಮಂಗಳೂರು-ಬೆಂಗಳೂರು ವಂದೇ ಭಾರತ್: ಜೂ.1 ರಂದು ಪ್ರಾಯೋಗಿಕ ಸಂಚಾರ

ಮಂಗಳೂರು-ಬೆಂಗಳೂರು ವಂದೇ ಭಾರತ್: ಜೂ.1 ರಂದು ಪ್ರಾಯೋಗಿಕ ಸಂಚಾರ

ಮಂಗಳೂರು: ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವೆ ಬಹು ನಿರೀಕ್ಷಿತ ‘ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜೂ.1ರಿಂದ ಪ್ರಾಯೋಗಿಕವಾಗಿ ಸಂಚರಿಸಲಿದೆ. 

ಜೂನ್‌ನಲ್ಲಿ ಈ ರೈಲು ಸಂಚರಿಸುವ ನಿರೀಕ್ಷೆ ಇದ್ದು, ಅದರ ಪೂರ್ವಭಾವಿಯಾಗಿ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಠಿಣವಾದ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಜೂ.1 ರಿಂದ ಆರಂಭವಾಗಲಿದೆ. ಸದ್ಯ ಈ ಭಾಗದಲ್ಲಿ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅಂತಿಮ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗುವ ಹಂತಕ್ಕೆ ತಲುಪಿವೆ. ರೈಲ್ವೆ ಸಚಿವಾಲಯದ ಗುಣಮಟ್ಟ ಮತ್ತು ಮಾನದಂಡಗಳ ವಿಭಾಗವಾದ ಆರ್‌ಡಿಎಸ್‌ಒ ಉನ್ನತ ಮಟ್ಟದ ತಂಡವು ಜೂನ್ 1 ರಿಂದ ಈ ಘಾಟ್ ಪ್ರದೇಶದಲ್ಲಿ ಸುಧಾರಿತ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ.

ಈ ಮಾರ್ಗವು ದುರ್ಗಮ  ತಿರುವುಗಳು ಹಾಗೂ 57 ಸುರಂಗಗಳನ್ನು ಹೊಂದಿದೆ. 55 ಕಿಮೀ ಕಠಿಣ ಘಾಟ್ ಮಾರ್ಗ ಇದೆ.  ಜೂನ್‌ನಲ್ಲೇ ರೈಲು ಸಂಚಾರ ಶುರು ಮಾಡುವುದಾಗಿ ಕೇಂದ್ರ ರೈಲು ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಇತ್ತೀಚಿಗೆ ತಿಳಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article