ಸೈನಿಕನ ಪತ್ನಿ ಆತ್ಮಹತ್ಯೆ

ಸೈನಿಕನ ಪತ್ನಿ ಆತ್ಮಹತ್ಯೆ

ಕಾಸರಗೋಡು: ಹೊಸ ಮನೆಗೆ ಗೃಹಪ್ರವೇಶ ಮಾಡಿ ಕೇವಲ ಒಂದು ತಿಂಗಳಷ್ಟೇ ಕಳೆದಿದ್ದ ಸೈನಿಕನ ಪತ್ನಿಯೊಬ್ಬರು ಮಲಗುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಮಂತೋಡಿ ಸಮೀಪದ ಮೂಡಂಕುಲಂನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ನಾಗಾಲ್ಯಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೇನಾ ಸಿಬ್ಬಂದಿ ರಾಜೇಶ್ ಕುಮಾರ್ ಅವರ ಪತ್ನಿ ಸೌಪರ್ಣಿಕಾ (41) ಎಂದು ಗುರುತಿಸಲಾಗಿದೆ. ಶನಿವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಹೊಸ ಮನೆಯ ಮೇಲಿನ ಮಹಡಿಯಲ್ಲಿರುವ ಕೊಠಡಿಯ ಫ್ಯಾನ್‌ಗೆ ಸೌಪರ್ಣಿಕಾ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಸಂಬಂಧಿಕರು ಮತ್ತು ನೆರೆಹೊರೆಯವರು ಅವರನ್ನು ಕೆಳಗಿಳಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮೂಲತಃ ನೆರೆಯ ಮುಳಿಯಾರು ಪಂಚಾಯತ್‌ನ ಪಾದನಡ್ಕದವರಾದ ಸೌಪರ್ಣಿಕಾ ಹಾಗೂ ರಾಜೇಶ್ ಕುಮಾರ್ ದಂಪತಿ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಹೊಸದಾಗಿ ನಿರ್ಮಿಸಿದ ಮನೆಗೆ ಗೃಹಪ್ರವೇಶ ಮಾಡಿ ವಾಸಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ರಾಜೇಶ್ ಕುಮಾರ್ ಅವರು ನಾಗಾಲ್ಯಾಂಡ್‌ಗೆ ವಾಪಸ್ ಕರ್ತವ್ಯಕ್ಕೆ ತೆರಳಿದ್ದರು. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಸದ್ಯ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪತಿ ರಾಜೇಶ್ ಕುಮಾರ್ ಅವರು ನಾಗಾಲ್ಯಾಂಡ್ನಿಂದ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article