ಅಕ್ರಮವಾಗಿ 16 ಜಾನುವಾರು ಸಾಗಾಟ: ಪತ್ತೆ, ಪ್ರಕರಣ ದಾಖಲು

ಅಕ್ರಮವಾಗಿ 16 ಜಾನುವಾರು ಸಾಗಾಟ: ಪತ್ತೆ, ಪ್ರಕರಣ ದಾಖಲು


ಮಂಗಳೂರು: ಅಕ್ರಮವಾಗಿ 16 ಜಾನುವಾರುಗಳನ್ನು ಉಪ್ಪಿನಂಗಡಿಯ ಆನೆಬೈಲು ಎಂಬಲ್ಲಿ ಈಚರ್‌ನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಜಾನುವಾರುಗಳನ್ನು ರಕ್ಷಿಸಲಾಗಿದೆ. 

ಬಂಧಿತರನ್ನು ಕಡೂರು ನಿವಾಸಿ ಪರ್ದಿನ್ ಖಾನ್ (24) ಹಾಗೂ ಹಾಸನ ಜಿಲ್ಲೆಯ ಹೋಳೆನರಸಿಪುರ ನಿವಾಸಿ ಜಾವೀದ್ ಪಾಷಾ (34) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಜೂ.17 ರಂದು ಬೆಳಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರು ಸಿಬ್ಬಂದಿಗಳೊಂದಿಗೆ ಉಪ್ಪಿನಂಗಡಿ, ಆನೆಬೈಲು ಎಂಬಲ್ಲಿ,  ಕೆಎ 14-ಎ-7511 ನಂಬರ್‌ನ ಈಚರ್ ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ 16 ಜಾನುವಾರುಗಳನ್ನು ಸಾಗಿಸುತ್ತಿರುವುದು ಕಂಡುಬಂದಿರುತ್ತದೆ. 

ಆರೋಪಿಗಳಲ್ಲಿ ಜಾನುವಾರು ಸಾಗಾಟದ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳನ್ನು ಹೊಂದದೇ ಅಕ್ರಮವಾಗಿ ಸಾಗಿಸುತ್ತಿರುವುದು ತಿಳಿದುಬಂದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿಯನ್ನು ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article