ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್‌ಗೆ ಎಸ್‌ಐಟಿಗೆ ದೂರು

ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್‌ಗೆ ಎಸ್‌ಐಟಿಗೆ ದೂರು


ಮಂಗಳೂರು: ಧರ್ಮಸ್ಥಳ ಪ್ರಕರಣದ ಚಿನ್ನಯ್ಯ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ತಂಡ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಇಂದು ಆಗಮಿಸಿ ದೂರು ನೀಡಿದೆ.

ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ ಅವರು, ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಪೊಲೀಸ್ ಭದ್ರತೆ ನೀಡಬೇಕು, ಚಿನ್ನಯ್ಯನನ್ನು ಬ್ರೈನ್ ಮ್ಯಾಪಿಂಗ್ ಮಾಡಬೇಕು. ಹೈಕೋರ್ಟ್‌ಗೆ ನೀಡಿದ ಹೇಳಿಕೆಯನ್ನು ಮಾಧ್ಯಮಗಳಿಗೆ, ಸಾಮಾಜಿಕ ಜಾಲತಾಣಗಳಿಗೆ ಕೊಡಬಾರದು ಎಂಬ ಜಾಮೀನು ಷರತ್ತು ಉಲ್ಲಂಘನೆಯಾಗಿರುತ್ತದೆ. ಹೀಗಾಗಿ ಎಸ್‌ಐಟಿ ತಂಡದ ನ್ಯಾಯವಾದಿಗಳು ಚಿನ್ನಯ್ಯನ ಜಾಮೀನು ರದ್ದತಿ ಅರ್ಜಿ ಸಲ್ಲಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನನ್ನು ಕೂಡ ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಲಿ’ ಮಾಧ್ಯಮಗಳಿಗೆ ಗಿರೀಶ್ ಮಟ್ಟಣ್ಣವರ್ ಪ್ರತಿಕ್ರಿಯಿಸಿದ್ದಾರೆ.

ತಂಡದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಅನಿಲ್ ಅಂತರ, ಪ್ರಕಾಶ್.ಸಿ ಬೆಂಗಳೂರು, ಮನೋಜ್ ಕುಂಜರ್ಪ, ಪ್ರದೀಪ್ ಕುಲಾಲ್, ಗಣೇಶ್ ಶೆಟ್ಟಿ, ಉದಯ ಉಜಿರೆ, ಶ್ರೀನಿವಾಸ್ ಮೊದಲಾದವರಿದ್ದರು.

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಹಿನ್ನೆಲೆಯಲ್ಲಿ ‘ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸಲು ತನಗೆ 50 ಲಕ್ಷ ರೂ. ಆಮಿಷ ಒಡ್ಡಲಾಗಿತ್ತು, ಧರ್ಮಸ್ಥಳಕ್ಕೆ ಮಸಿ ಬಳಿಯಲು 200 ಕೋಟಿ ಷಡ್ಯಂತ್ರ ಹೂಡಲಾಗಿದೆ ಎಂದು ಹೈಕೋರ್ಟ್‌ಗೆ ಬುರುಡೆ ಚಿನ್ನಯ್ಯ ಮಾಹಿತಿ ನೀಡಿದ್ದ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article