ಜಾರೊಳಿ ಸಾಹಿತ್ಯ ಸಮ್ಮೇಳನ: ಆರುಂಧತಿ, ಅನ್ನಿ ಜಾರೊಳಿ ಸನ್ಮಾನಕ್ಕೆ ಆಯ್ಕೆ

ಜಾರೊಳಿ ಸಾಹಿತ್ಯ ಸಮ್ಮೇಳನ: ಆರುಂಧತಿ, ಅನ್ನಿ ಜಾರೊಳಿ ಸನ್ಮಾನಕ್ಕೆ ಆಯ್ಕೆ


ಮಂಗಳೂರು: ಮಂಗಳೂರಿನಲ್ಲಿ ನಡೆಯುವ ಕೊಂಕಣಿ ೫ನೇ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಕವಯತ್ರಿಯರಾದ ಮಂಗಳೂರಿನ ಅರುಂಧತಿ ವಿ.ರಾವ್ ಮತ್ತು ಗೋವಾದ ಆನ್ನಿ ದೆ ಕೊಲ್ವಾಲೆ ಅವರು ಚಾರೊಳಿ ರಾಷ್ಟ್ರೀಯ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಮ್ಮೇಳನದ ಅಧ್ಯಕ್ಷ ರೇಮಂಡ್ ಡಿಕುನ್ಹ ತಾಕೊಡೆ ತಿಳಿಸಿದರು.

ಜು.19 ರಂದು ಒಂದು ದಿನದ ಕೊಂಕಣಿ ಐದನೇ ಚಾರೊಳಿ ಸಾಹಿತ್ಯ ಸಮ್ಮೇಳನ ಮಂಗಳೂರಿನ ಬಲ್ಮಠ ಸಹೋದಯದಲ್ಲಿ ನಡೆಯಲಿದ್ದು, ದೆಹಲಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕಾರವಾರ, ಕೇರಳ ಮತ್ತು ದುಬೈನ ಕವಿಗಳು ನೋಂದಣಿ ಮಾಡಿದ್ದಾರೆ. ಬೆಳಗ್ಗೆ 8 ಗಂಟೆಗೆ ರಂಗಭೂಮಿ ತರಬೇತುದಾರ, ಕವಿ ಗೋವಾ ಕಾಣಕೋಣದ ಗೌರೀಶ ವರ್ಣೇಕರ್ ಕವಿಗೋಷ್ಠಿಗೆ ಚಾಲನೆ ನೀಡುವರು. ಬೆಳಗ್ಗೆ 10ಕ್ಕೆ ಮಂಗಳೂರಿನ ಜಿಲ್ಲಾ ಪ್ರಧಾನ ಅಭಿಯೋಜಕ ಎಂ.ಪಿ.ನೊರೊನ್ಹ ಉದ್ಘಾಟಿಸುವರು. ಉದ್ಯಮಿ ವಿನ್ಸೆಂಟ್ ಕುಟಿನ್ಹೊ ಮುಖ್ಯ ಅತಿಥಿಯಾಗಿರುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಮಧ್ಯಾಹ್ನ ಬಳಿಕ ವಿದ್ಯಾರ್ಥಿ ಹಾಗೂ ಕವಿಗಳು ಮುಕ್ತವಾಗಿ ಸಾಹಿತ್ಯ, ಕವಿತೆ ಬಗ್ಗೆ ಸಂವಾದ ಒಪನ್ ಹೌಸ್ ನಡೆಸಲಿದ್ದಾರೆ.

ಸಮಾರೋಪ ಭಾಷಣವನ್ನು ಗೋವಾದ ಪ್ರಕಾಶಕಿ ಹಾಗೂ ಕೊಂಕಣಿ ಮಾತೃಭಾಷೆ ಶಿಕ್ಷಕಿ ಯೊಗಿತಾ ವರ್ಣೇಕರ್ ಮಾಡಲಿದ್ದಾರೆ. ಸಮ್ಮೇಳನದ ಅಯೋಜನೆಯ ಗುರ್ಕಾರ್ ಗೌರೀಶ ವರ್ಣೇಕರ್ ಮಡ್ಗಾಂವ್ ಗೋವಾ ಮತ್ತು ಸಮಿತಿ ಸದಸ್ಯರು ಕೇರಳದ ವಿಜಯ್ ಪೈ, ಕರ್ನಾಟಕ ಕಾರವಾರದ ಸಂದೇಶ ಬಾಂದೇಕರ್, ಗೋವಾದ ಆನ್ನಿ ಫೆರ್ನಾಂಡಿಸ್ ತೀವಿಮ್ ಗೋವಾ, ಪಣಜಿ ಗೋವಾದ ಅನಘಾ ಕಾಮತ್, ದೆಹಲಿಯ ಗೋಪಾಲಕೃಷ್ಣ ಪ್ರಭು, ಕರ್ನಾಟಕ ಬೆಂಗಳೂರಿನ ಜಾನೆಟ್ ವಾಸ್ ಆಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಮ್ಮೇಳನದ ಅಯೋಜನಾ ಸಮಿತಿಯ ಕಾರ್ಯದರ್ಶಿ ರಿಯಾನ ಡಿಕುನ್ಹ, ಮಾದ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್, ಕಾರ್ಯಕಾರಿ ಸದಸ್ಯ ಸ್ಟ್ಯಾನಿ ತಾವ್ರೊ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article