ವಿದ್ಯಾಥಿ೯ಗಳು ಸ್ಮಾರ್ಟ್ ನ ಜತೆಗೆ ಸ್ಟ್ರೀಟ್ ಸ್ಮಾಟ್೯ ಆಗಿರಬೇಕು: ಸಚಿವ ಯು.ಟಿ. ಖಾದರ್ ಸಲಹೆ

ವಿದ್ಯಾಥಿ೯ಗಳು ಸ್ಮಾರ್ಟ್ ನ ಜತೆಗೆ ಸ್ಟ್ರೀಟ್ ಸ್ಮಾಟ್೯ ಆಗಿರಬೇಕು: ಸಚಿವ ಯು.ಟಿ. ಖಾದರ್ ಸಲಹೆ

16ನೇ ಆವೃತ್ತಿಯ ಬೃಹತ್ ಉಚಿತ ಉದ್ಯೋಗ ಮೇಳ "ಆಳ್ವಾಸ್ ಪ್ರಗತಿ-2026" ಗೆ ಚಾಲನೆ 


ಮೂಡುಬಿದಿರೆ: ಉದ್ಯೋಗಕ್ಕೆ ಶಿಕ್ಷಣದ ಜತೆಗೆ ಕೌಶಲ್ಯದ ಅವಶ್ಯಕತೆ ಇದೆ. ವಿದ್ಯಾಥಿ೯ಗಳು ಕ್ಲಾಸಿನಲ್ಲಿ ಮಾತ್ರ ಸ್ಮಾರ್ಟ್ ಆಗಿರದೆ  ಸ್ಟ್ರೀಟ್ ಸ್ಮಾರ್ಟ್ ಆಗಿದ್ದರೆ ಮಾತ್ರ ಕಂಪನಿಗಳು ಕರೆದು ಉದ್ಯೋಗದ ಅವಕಾಶವನ್ನು ನೀಡುತ್ತವೆ ಎಂದು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್‌ ಹೇಳಿದರು.


ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ವು ಎರಡು ದಿನಗಳ ಕಾಲ  ಆಯೋಜಿಸಿರುವ ದೇಶದ ಅತಿ ದೊಡ್ಡ ಉಚಿತ ಉದ್ಯೋಗ ಮೇಳ "ಆಳ್ವಾಸ್ ಪ್ರಗತಿ-2026"ರ 16ನೇ ಆವೃತ್ತಿಯನ್ನು ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದ ದಿವಂಗತ ಎ.ಕೆ. ಮಹೇಶ್ ಶೇಖ್ ವೇದಿಕೆಯಲ್ಲಿ ಚಾಲನೆ ನೀಡಿ ಮಾತನಾಡಿದರು. 


ರಾಜಕರಣಿಗಳು ಮಾಕ್ಸ್೯ನಲ್ಲಿ ಸ್ಮಾರ್ಟ್ ಆಗಿರದಿದ್ದರೂ ಸ್ಟ್ರೀಟ್ ಸ್ಮಾಟ್೯ ಆಗಿರುವುದರಿಂದಲೇ ಎಲ್ಲಾ ಜಂಜಾಟಗಳನ್ನು ನಿಭಾಯಿಸುವ ಶಕ್ತಿ ಬಂದಿದೆ ಎಂದ ಅವರು ಯಾವುದೇ ಕಂಪನಿಯಲ್ಲಿ ನಿಮಗೆ ಉದ್ಯೋಗ ಸಿಕ್ಕಿದರೆ ಪ್ರಾಮಾಣಿಕತೆ ಮತ್ತು ಬದ್ದತೆಯೊಂದಿಗೆ ಕೆಲಸ ಮಾಡಿ ವಿವಿಧ ಕಾರಣಗಳನ್ನು ನೀಡಿ ಕೆಲಸ ಬಿಡಬೇಡಿ. ಕರಾವಳಿಯ ಯು ಕರು ನಂಬಿಕೆಕೆ ಆಹ೯ರು ಎಂಬ ಹೆಸರನ್ನು ಉಳಿಸಿ ಮಾದರಿಯಾಗಿ ಇದರಿಂದ ಇತರರಿಗೆ ಪ್ರಯೋಜನವಾಗಲಿ ಎಂದು ಸಲಹೆ ನೀಡಿದರು. 


ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ತನ್ನ ಕ್ಷೇತ್ರದಲ್ಲಿರುವ ಆಳ್ವಾಸ್ ನಲ್ಲಿ ಉದ್ಯೋಗ ಮೇಳ ನಡೆಯುತ್ತಿರುವುದು ತನಗೆ ಹೆಮ್ಮೆ ಎಂದರು. 


ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನವೋದ್ಯಮವನ್ನು ದೊಡ್ಡ ಮಟ್ಟಕ್ಕೆ ಹೇಗೆ ಬೆಳೆಸಬಹುದು ಎಂದು ತೋರಿಸಿಕೊಟ್ಟವರು ಡಾ. ಎಂ. ಮೋಹನ ಆಳ್ವರು.

ಯಾವುದೇ ಕಾಯ೯ಕ್ರಮವನ್ನು ವ್ಯವಸ್ಥಿತ  ರೀತಿಯಲ್ಲಿ ಮಾಡುವ, ಸಮಾಜಮುಖಿಯಾಗಿ ಯೋಚನೆ ಮಾಡಿ ರಾಷ್ಟ್ರ ನಿಮಾ೯ಣದಲ್ಲಿ ಒಂದು ದೊಡ್ಡ ಪಾತ್ರ ವಹಿಸುವ ಮೂಲಕ ಭಾರತಕ್ಕೆ ಮಾಡೆಲ್ ಆಗಿದ್ದಾರೆ. 

ಪ್ರಧಾನಿ ಅವರ ವಿಕಸಿತ ಭಾರತದ ಕನಸು ನನಸಾಗಲು ಮೋಹನ್ ಆಳ್ವರಂತಹ ವ್ಯಕ್ತಿತ್ವದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕಾಗಿದೆ ಎಂದ ಅವರು ವಿದ್ಯಾಥಿ೯ಗಳು  ಉದ್ಯೋಗ ನೀಡುವ ಕಂಪನಿಗಳಲ್ಲಿ ಪ್ರಾಮಾಣಿಕತೆಯಿಂದ ದುಡಿದು ಜಿಲ್ಲೆಯ ಹೆಸರು, ಪರಂಪರೆಯನ್ನು ಉಳಿಸಿ ಬೆಳೆಸಿ ಎಂದರು.

ಕರಾವಳಿಯ ಸಾಧಕರಿಗೆ ಗೌರವ ಸನ್ಮಾನ:

ಉದ್ಯೋಗ ಸೃಷ್ಟಿ, ಉದ್ಯಮಶೀಲತೆ ಹಾಗೂ ಸಮಾಜಮುಖಿ ಸೇವೆಯಲ್ಲಿ ಗಣನೀಯ ಸಾಧನೆಗೈದು ಸಮಾಜಕ್ಕೆ ಮಾದರಿಯಾಗಿರುವ   ಬೆಳ್ತಂಗಡಿಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನ ಶ್ರೀ ಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ, ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಭವಾನಿ ಗ್ರೂಪ್‌ ಸಂಸ್ಥಾಪಕ ಹಾಗೂ ಅಧ್ಯಕ್ಷ ಕುಸುಮಾಧರ ಡಿ. ಶೆಟ್ಟಿ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹಾಗೂ ಎಕ್ಸರ್ಟೀಸ್ ಕಾಂಟ್ರಾಕ್ಸಿಂಗ್ ಕಂಪನಿಯ ಸಹ-ಸಂಸ್ಥಾಪಕ ಮಹಮ್ಮದ್ ಆಶ್ಚಾಕ್ ಅವರನ್ನು ಸನ್ಮಾನಿಸಲಾಯಿತು.

ಸ್ಕೌಟ್ಸ್ & ಗೈಡ್ಸ್ ನ ರಾಜ್ಯ ಆಯುಕ್ತರಾದ ಪಿ. ಜಿ. ಆರ್. ಸಿಂಧ್ಯಾ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅತಿಥಿಗಳಾಗಿ ಭಾಗವಹಿಸಿದ್ದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಉದ್ಯೋಗಮೇಳದಲ್ಲಿ 350ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು 26,300ಕ್ಕೂ ಅಧಿಕ ಉದ್ಯೋಗಗಳ ಅವಕಾಶಗಳಿವೆ ಎಂದರು. ಉಪನ್ಯಾಸಕ ವೇಣುಗೋಪಾಲ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

ಶಿಕ್ಷಣದಲ್ಲಿ ಎಐನ್ನು ಬಳಸಿಕೊಳ್ಳಿ:

ಇಂದು ಪ್ರತಿಯೊಬ್ಬನಿಗೂ ಎ. ಐ ಯ ಅವಶ್ಯಕತೆಯಿದೆ. ವಿದ್ಯಾಥಿ೯ಗಳು ಎಐನಲ್ಲಿ ಎಕ್ಸ್ ಪಟ್೯ ಆಗವಂತಹ ಕೆಲಸ ಮಾಡಿ. ಇದು ಯಾವುದೇ ಯಾರ ಕೆಲಸವನ್ನು ತೆಗೆಯಲ್ಲ ಬದಲಾಗಿ ನಿಮ್ಮನ್ನು ಹೆಚ್ಚು ಸ್ಮಾರ್ಟ್ ಮಾಡುತ್ತದೆ ಮತ್ತು ಬೇರೆ ಬೇರೆ ಕಡೆ ಅವಕಾಶಗಳು ಸಿಗುತ್ತದೆ. 

 ಶಿಕ್ಷಣ ಸಂಸ್ಥೆಗಳು ಕೂಡಾ ಡಿಗ್ರಿ ಜತೆಗೆ ಎ. ಐ ಶಿಕ್ಷಣವನ್ನು ಸೇಪ೯ಡೆಗೊಳಿಸಿದರೆ ಉತ್ತಮ ಇಲ್ಲದಿದ್ದರೆ 10 ವಷ೯ಗಳ ನಂತರ ಉದ್ಯೋಗದಲ್ಲಿ ಸಮಸ್ಯೆಯಾಗಬಹುದು : ಯು. ಟಿ. ಖಾದರ್ ( ಆರೋಗ್ಯ ಸಚಿವ)

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article