ಸಂದೀಪ್ ಬೆದ್ರ ಅವರ ಚೊಚ್ಚಲ ನಿದೇ೯ಶನದ "ಪಿಚ್ಚರ್" ತೆರೆಗೆ
Thursday, August 6, 2026
ಮೂಡುಬಿದಿರೆ: ಕಳೆದ ಹತ್ತು ವಷ೯ಗಳಿಂದ ತುಳು ಚಲನಚಿತ್ರ ರಂಗದಲ್ಲಿ ಸಹ ನಿದೇ೯ಶಕರಾಗಿ ಗುರುತಿಸಿಕೊಂಡಿರುವ ಮೂಡುಬಿದಿರೆ ತಾಲೂಕಿನ ಅಶ್ವತ್ಥಪುರದ ಸಂದೀಪ್ ಬೆದ್ರ ಅವರು ಮೊದಲ ಬಾರಿಗೆ ನಿದೇ೯ಶನ ಮಾಡಿರುವ "ಪಿಚ್ಚರ್" ಶುಕ್ರವಾರ (ಆ. 7ಕ್ಕೆ)ತೆರೆಗೆ ಬರಲಿದೆ.
ಸಂಪೂರ್ಣ ಹಾಸ್ಯಮಯ ಕಥೆಯನ್ನು ಹೊಂದಿರುವ " ಪಿಚ್ಚರ್" ನಲ್ಲಿ ಅನೇಕ ಖ್ಯಾತ ನಟರು, ಹಾಸ್ಯ ಕಲಾವಿದರು ಮತ್ತು ಅನುಭವಿ ತಂತ್ರಜ್ಞರನ್ನೊಳಗೊಂಡ ತುಳು ಚಿತ್ರರಂಗದ ದೊಡ್ಡ ತಾರಾ ಬಳಗವಿದೆ.
ಸಂದೀಪ್ ಬೆದ್ರ ಅವರು ಕನ್ನಡ, ತುಳು ಮತ್ತು ಕೊಂಕಣಿ ಸೇರಿ 24 ಕ್ಕೂ ಅಧಿಕ ಸಿನೆಮಾಗಳಲ್ಲಿ ಸಹ ನಿದೇ೯ಶಕರಾಗಿ ಕೆಲಸ ಮಾಡಿರುವ ಅನುಭವಿಯಾಗಿದ್ದು ಇದೀಗ " ಪಿಚ್ಚರ್" ಮೂಲಕ ನಿದೇ೯ಶಕರಾಗಿ ಸಿನಿ ಪ್ರಿಯರ ಮುಂದೆ ಬಂದಿದ್ದು ಜನರು ಸಹಕಾರ ನೀಡುವ ನಿರೀಕ್ಷೆಯನ್ನು ಹೊಂದಿದ್ದಾರೆ.