ಆ. 9ರಂದು ಮೂಡುಬಿದಿರೆಯಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಬೃಹತ್ ಪಂಜಿನ ಮೆರವಣಿಗೆ

ಆ. 9ರಂದು ಮೂಡುಬಿದಿರೆಯಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಬೃಹತ್ ಪಂಜಿನ ಮೆರವಣಿಗೆ


ಮೂಡುಬಿದಿರೆ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದೂ ಜಾಗರಣಾ ವೇದಿಕೆ ಮೂಡುಬಿದಿರೆ ತಾಲೂಕು, ಮಂಗಳೂರು ಜಿಲ್ಲೆ ಇದರ ವತಿಯಿಂದ ಆ. 9ರಂದು ಸಂಜೆ  ಬೃಹತ್ ಪಂಜಿನ  ಮೆರವಣಿಗೆ ನಡೆಯಲಿದೆ.

ಖ್ಯಾತ ನ್ಯಾಯವಾದಿ ಹಾಗೂ ವಾಗ್ಮಿ  ಶರತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಬೃಹತ್ ಪಂಜಿನ ಮೆರವಣಿಗೆಯು  ಆದಿತ್ಯವಾರ ಸಂಜೆ 6:30ಕ್ಕೆ ಸಾವಿರ ಕಂಬದ ಬಸದಿಯಿಂದ ಸಮಾಜ ಮಂದಿರದವರೆಗೆ ನಡೆಯಲಿದ್ದು

ಇದಕ್ಕೆ ಮೂಡುಬಿದಿರೆ ಜೈನ ಮಠದ  ಭಟ್ಟಾರಕ ಸ್ವಾಮೀಜಿ ಅವರು ಚಾಲನೆ ನೀಡಲಿದ್ದಾರೆ. 

ಪ್ರಖರ ವಾಗ್ಮಿಗಳು ಪೃಥ್ವಿಶ್ ಧರ್ಮಸ್ಥಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ರುದ್ರಾಂಶ ಕನ್ಸ್ಟ್ರಕ್ಷನ್ಸ್ ನ ಮಾಲಕರಾಗಿರು  ಅಜಯ್ ದೀಕ್ಷಿತ್ ಶೆಟ್ಟಿ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article