
Chikkamagaluru: ಜೆ.ಸಿ.ಐ. ಮಲ್ನಾಡ್‌ನ ನೂತನ ಅಧ್ಯಕ್ಷರಾಗಿ ಪುಷ್ಪ ವಿಜಯಕುಮಾರ್
Wednesday, February 7, 2024
ಚಿಕ್ಕಮಗಳೂರು: ಜೆ.ಸಿ.ಐ. ಮಲ್ಲಾಡ್‌ನ ೨೦೨೪ ರ ನೂತನ ಅಧ್ಯಕ್ಷರಾಗಿ ಪುಷ್ಪ ವಿಜಯ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಹಿಂದೆ ೨೦೨೩ ರಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಜೇಸಿ ಚೈತ್ರ ಡಿ.ಸಿ. ಇವರು ತಮ್ಮ ಅಧಿಕಾರವಧಿಯ ವರದಿಯನ್ನು ನೀಡಿ ಅಧಿಕಾರ ಹಸ್ತಾಂರರಿಸಿದ್ದು, ಜೆ.ಎಫ್.ಎಂ. ಆಶಾ ಜೈನ್ ಅವರು ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದ್ದರು.