Chikkamaggaluru: ಚೀಲನಹಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಪೂರ್ಣ ಕುಂಭದೊಂದಿಗೆ ಸ್ವಾಗತ

Chikkamaggaluru: ಚೀಲನಹಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಪೂರ್ಣ ಕುಂಭದೊಂದಿಗೆ ಸ್ವಾಗತ


ಚಿಕ್ಕಮಗಳೂರು: ಸಂವಿಧಾನ ಜಾಗೃತಿ ಜಾಥಾವು ಫೆಬ್ರವರಿ ೨೨ ರಂದು ಕಡೂರು ತಾಲ್ಲೂಕಿನಲ್ಲಿ ಸಂಚರಿಸುತ್ತಿದ್ದು, ಚೀಲನಹಳ್ಳಿ, ಬಳ್ಳೆಕೆರೆ, ಕಡೂರಳ್ಳಿ, ತಂಗಲಿ, ವಿ. ಯರದಕೆರೆ, ಸೋಮನಹಳ್ಳಿ, ಕೆರೆಸಂತೆ ಹಾಗೂ ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿತು.

ಪ್ರಥಮವಾಗಿ ಚೀಲನಹಳ್ಳಿ ಗ್ರಾಮ ಪಂಚಾಯತಿಗೆ ಆಗಮಿಸಿದ ಜಾಗೃತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ದಲಿತ ಮುಖಂಡರು, ಶಿಕ್ಷಕರು, ಶಾಲಾ ಮಕ್ಕಳು, ಅಂಗನವಾಡಿ ಸಿಬ್ಬಂದಿಗಳು, ಸ್ವಸಹಾಯ ಸಂಘಗಳು, ಸ್ತೀ ಶಕ್ತಿ ಸಂಘದ ಸದಸ್ಯರುಗಳು ಮತ್ತು ಸಾರ್ವಜನಿಕರು ಸಂಭ್ರಮದಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪುಷ್ಪಾರ್ಚನೆ ಮಾಡಿದರು.

ಶಾಲಾ ಮಕ್ಕಳು, ಛದ್ಮವೇಷಧಾರಿಗಳು, ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳೊಂದಿಗೆ, ಬೈಕ್ ರ್‍ಯಾಲಿ, ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಭಾರತಾಂಬೆ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಸುಭಾಷ್‌ಚಂದ್ರ ಭೋಸ್, ಗಾಂಧೀಜಿ, ಸ್ವಾಮಿ ವಿವೇಕಾನಂದ ವೇಷಗಳನ್ನು, ಮುಂತಾದ ಸ್ಥಬ್ದಚಿತ್ರಗಳು ಹಾಗೂ ಡ್ರಂಸೆಟ್ ವಾದ್ಯ, ತಮಟೆ ವಾದ್ಯ, ವೀರಗಾಸೆ ಕುಣಿತ, ಡೊಳ್ಳು ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬಲೂನುಗಳನ್ನು ಹಾರಿಬಿಡಲಾಯಿತು. ನಂತರ ಶಿಕ್ಷಕರು ಮತ್ತು ಮಕ್ಕಳು ಸಂವಿಧಾನ ಪೀಠಿಕೆ ಭೋದಿಸಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. 

ಚೀಲನಹಳ್ಳಿ ಅಧ್ಯಕ್ಷರು ಮಾತನಾಡಿ, ಸಂವಿಧಾನದ ಮಹತ್ವ, ಮಹಿಳೆಯರಿಗೆ ಸಮಾನತೆ, ಅವಕಾಶಗಳ ಸೃಷ್ಟಿ ಕುರಿತು ತಿಳಿಸಿದರು. ಶಿಕ್ಷಕರು ಸಂವಿಧಾನ ರಚನಾ ಸಮಿತಿ, ಕರಡು ಸಮಿತಿ, ಕಾನೂನು ಮತ್ತು ಮಾರ್ಗಸೂಚಿಗಳ ಗುಂಪು, ಸೈಮನ್ ಆಯೋಗ, ರಾಜಕೀಯ ಸಂಸ್ಥೆಗಳ ಚೌಕಟ್ಟು ಹಾಗೂ ಸರ್ಕಾರದ ಪ್ರಕ್ರಿಯೆ, ಸಂವಿಧಾನದ ಲಕ್ಷಣಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಸಂವಿಧಾನದ ಮಹತ್ವ, ರಚನಾ ಸಭೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕುರಿತು ಮಾಹಿತಿ ತಿಳಿಸಿದರು. 









Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article