
Kundapura: ವರ್ಲ್ಡ್ ರಾಮಾಯಣ ಚಾಂಪಿಯನ್ ಶಿಪ್ -2023 ಸ್ಪರ್ಧೆಯಲ್ಲಿ ವಿನ್ಯಾಸ್ ಶೇಟ್ ದ್ವಿತೀಯ
Thursday, February 8, 2024
ಕುಂದಾಪುರ: ಅಯೋಧ್ಯಾ ಫೌಂಡೇಶನ್ ಬೆಂಗಳೂರು ಏರ್ಪಡಿಸಿದ್ದ ವರ್ಲ್ಡ್ ರಾಮಾಯಣ ಚಾಂಪಿಯನ್ ಶಿಪ್ -2023 ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗಳು ಪೋಷಕರೊಂದಿಗೆ ಅಯೋಧ್ಯೆ ಪ್ರವಾಸದ ಅವಕಾಶ ಪಡೆದಿದ್ದಾರೆ.
ಚಾಂಪಿಯನ್ ಶಿಪ್ ಪರೀಕ್ಷೆಯಲ್ಲಿ ಒಟ್ಟು 13,028 ಮಂದಿ ಭಾಗವಹಿಸಿದ್ದು, ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಫಲಿತಾಂಶ ಪ್ರಕಟವಾಗಿದೆ ಎಂದು ಅಯೋಧ್ಯಾ ಫೌಂಡೇಶನ್ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತು ಉಪಾಧ್ಯಕ್ಷ ವೃಶಾಂಕ್ ಭಟ್ ತಿಳಿಸಿದ್ದಾರೆ.
ಫೆ.4 ರಂದು ಬೆಂಗಳೂರಿನಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ವಿನ್ಯಾಸ್ ವಿ. ಶೇಟ್ ದ್ವಿತೀಯ ಸ್ಥಾನೀಯಾಗಿ ಪ್ರಶಸ್ತಿ ಪತ್ರ ಹಾಗೂ 25,000 ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಈತ ಕುಂದಾಪುರದ ನಿವಾಸಿ ಎಸ್.ಜಿ. ವಸಂತ್ ಶೇಟ್ ಹಾಗೂ ವೈಶಾಲಿ ದಂಪತಿಗಳ ಪುತ್ರ.