Kundapura: ಫೆ.4: ರಕ್ತದಾನ ಶಿಬಿರ
Friday, February 2, 2024
ಕುಂದಾಪುರ:ಜೈ ಶಿವಾಜಿ ಸೇವಾಟ್ರಸ್ಟ್ (ರಿ.), ಶ್ರೀ ಮಹಾಗಣಪತಿ ಯುವಕ ಮಂಡಲ (ರಿ.) ಹಟ್ಟಿಕುದ್ರು, ಶ್ರೀ ಕೃಷ್ಣ ಪೈಪ್ ಇಂಡಸ್ಟ್ರೀಸ್ ಕರ್ಕಿ ಹಟ್ಟಿಯಂಗಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.)ಉಡುಪಿ ಇವರ ಸಂಯೋಜನೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ದೆ ಕುಂದಾಪುರ ಇವರ ಸಹಕಾರದೊಂದಿಗೆ ಫೆ.4 ರಂದು ಭಾನುವಾರ ಹಟ್ಟಿಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ.
ಈ ಸಂಧರ್ಭದಲ್ಲಿ ಸಮಾಜಸೇವಕರಿಗೆ ಹಾಗೂ ರಕ್ತದಾನಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.