Mangalore: ಫೆ.15: ಸಿ.ಎ. ಇಂಟರ್ಮೆಡಿಯೇಟ್-ಓರಿಯೆಂಟೇಷನ್ ಕಾರ್ಯಕ್ರಮ
Wednesday, February 14, 2024
ಮಂಗಳೂರು: ಸಿ.ಎ. ಪದವಿಯ ಎರಡನೆಯ ಹಂತವಾದ ಸಿ.ಎ. ಇಂಟರ್ಮೆಡಿಯೇಟ್ನ ಕಾರ್ಯವೈಖರಿ ಹಾಗೂ ಯೋಜನೆಯ ಕುರಿತಾದ ವಿವರಣೆಯ ಕಾರ್ಯಕ್ರಮವು ಫೆಬ್ರವರಿ 15 ರಂದು ಬೆಳಿಗ್ಗೆ 10 ಗಂಟೆಯಿಂದ ರೋಟರಿ ಬಾಲ ಭವನ, ಗಾಂಧಿನಗರ ಮಂಗಳೂರು ಇಲ್ಲಿ ನಡೆಯಲಿದ್ದು ಸಿ.ಎ. ಇಂಟರ್ಮೆಡಿಯೇಟ್ ತರಬೇತಿಯ ಕುರಿತು ಮಾಹಿತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಭಾಗವಹಿಸಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.