
Mangalore: ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರದಲ್ಲಿ ಗೆಲುವು: ಸಲೀಂ ಅಹ್ಮದ್
ಮಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಲಿದೆ. ಫೆಬ್ರವರಿ ಅಂತ್ಯಕ್ಕೆ ರಾಜ್ಯಾಧ್ಯಂತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.
ಅವರು ಫೆ.11 ರಂದು ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಈಗಾಗಲೇ ರಾಜ್ಯಾಧ್ಯಂತ ಸರ್ವೆ ಕಾರ್ಯ ನಡೆದಿದ್ದು, ಪ್ರತೀ ಜಿಲ್ಲೆಗಳಲ್ಲಿ ಕನಿಷ್ಠ 4 ರಿಂದ 20 ಮಂದಿ ಅಭ್ಯರ್ಥಿಗಳು ಆಕಂಕ್ಷಿಗಳು ಇದ್ದು, ದ.ಕ. ಜಿಲ್ಲೆಯಲ್ಲಿ ೫ ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ತಲುಪಿಸುತ್ತಿದ್ದು, ಜನರು ಸರ್ಕಾರವನ್ನು ಮೆಚ್ಚಿಕೊಂಡಿದ್ದಾರೆ. ನಮ್ಮ ಸಾಧನೆಯನ್ನು ಸಹಿಸದ ಬಿಜೆಪಿ ಜನರಲ್ಲಿ ಸುಳ್ಳನ್ನು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಮಲತಾಯಿ ದೋರಣೆಯನ್ನು ಅನುಸರಿಸುತ್ತಿದ್ದು, ರಾಜ್ಯಕ್ಕೆ 50 ಸಾವಿರ ಕೋಟಿ ಅನುದಾನ ಬರಲು ಬಾಕಿ ಇದೆ. ರಾಜ್ಯದಲ್ಲಿ 223 ತಾಲೂಕಿನಲ್ಲಿ ಬರ ಇದ್ದು, ಕಳೆದ 5 ತಿಂಗಳಿನಿಂದ ಮುಖ್ಯಮಂತ್ರಿಗಳು ಕೇಂದ್ರ ವಿತ್ತ ಸಚಿವರಿಗೆ 17 ಬಾರಿ ಪತ್ರವನ್ನು ಬರೆದಿದ್ದರೂ, 1 ರೂ. ಕೂಡ ನೀಡಿಲ್ಲ. ಕೇಳಿದರೆ ಅದು ಆರ್ಥಿಕ ಇಲಾಖೆ ಯಾವ ರೀತಿಯಲ್ಲಿ ಬೇಕಾದರೂ ನಿರ್ದಾರ ತೆಗೆದುಕೊಳ್ಳುತ್ತಾರೆ ನಾನು ಏನು ಮಾಡಲು ಆಗುವುದಿಲ್ಲ ಎಂದು ಹೇಳಿದ್ದು, ಅದರು ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು.
ಕೇಂದ್ರ ವಿತ್ತ ಸಚಿವರು ರಾಜ್ಯದಿಂದ ಆಯ್ಕೆಯಾಗಿದ್ದು, ಅವರು ರಾಜ್ಯವನ್ನು ವಿನಾಶದತ್ತ ಕೊಂಡೋಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಕ್ಕಿಯಲ್ಲೂ ಅನ್ಯಾಯ ಮಾಡಿದರು ಈಗ ಅನುದಾನ ನೀಡುವಲ್ಲೂ ಅನ್ಯಾಯ ಮಾಡಿದೆ. ಬಿಜೆಪಿ ಕೇವಲ ಶ್ರೀಮಂತರ ಸರ್ಕಾರವಾಗಿದ್ದು, ಕೇವಲ ಅದಾನಿ-ಅಂಬಾನಿ ಪರ ಸರ್ಕಾರವಾಗಿದೆ. ಎಂದರು.
ಜೆಡಿಎಸ್ ಜಾತ್ಯಾತೀತ ಎಂದು ಹೇಳುತ್ತಿದ್ದು, ಕೇವಲ ಅಧಿಕಾರಕ್ಕೆ ಆಸೆ ಪಡುತ್ತಿದೆ. ಕೇವಲ ಅವಕಾಶಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದೆ. ಅಮಿತ್ ಶಾ ಅವರು ರಾಜ್ಯದಲ್ಲಿ 28 ಸ್ಥಾನದಲ್ಲಿ 28 ಸ್ಥಾನವೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದ್ದು, ಅವರು ಯಾಕೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದ ಅವರು ಈ ಬಾರಿ ಕೇಂದ್ರದಲ್ಲಿ ಐ.ಎನ್.ಡಿ.ಐ.ಎ. ಮೈತ್ರಿ ಕೂಟ ಅಧಿಕಾರಕ್ಕೆ ಬರಲಿದೆ ಎಂದರು.
ದೂರು ನೀಡಿದರೆ ಕ್ರಮ:
ಕೆಂಪಣ್ಣ ಅವರು ಅಧಿಕಾರಿಗಳು 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದು, ಅವರು ದೂರು ನೀಡಿದರೆ ಸೂಕ್ತ ಕ್ರಮ ಕೈಗಿಳ್ಳಲಾಗುವುದು. ಇದಕ್ಕಾಗಿ ಪ್ರತ್ಯೇಕ ಕಮಿಟಿಯನ್ನು ರಚನೆ ಮಾಡಿ, ತನಿಖೆ ನಡೆಸಲಾಗುವುದು ಎಂದರು.
ಚುನಾವಣೆಗಾಗಿ ಸಿಎಎ:
ಕಳೆದ ಐದು ವರ್ಷದಿಂದ ಸುಮ್ಮನಿದ್ದ ಪ್ರಧಾನಮಂತ್ರಿಗಳು ಚುನಾವಣೆಗೆ 2 ತಿಂಗಳು ಇರುವಾಗ ಸಿಎಎ ಬಗ್ಗೆ ಮಾತನಾಡುತ್ತಿದ್ದು, ಇದು ಕೇವಲ ಚುನಾವಣೆಗಾಗಿ ಮಾಡುತ್ತಿರು ತಂತ್ರ ಎಂದು ಹೇಳಿದರು.
ಕೆ ಹರೀಶ್ ಕುಮಾರ್, ಬಿ ರಮಾನಾಥ್ ರೈ, ಮಂಜುನಾಥ್ ಬಂಡಾರಿ, ವಿನಯ ಕುಮಾರ್ ಸೊರಕೆ, ಐವನ್ ಡಿ’ಸೋಜಾ, ಮಿಥುನ್ ರೈ, ಜೆಆರ್ ಲೋಬೊ, ಶಶಿದರ್ ಹೆಗ್ಡೆ, ಮಮತಾ ಗಟ್ಟಿ, ಸುರೇಶ್ ಬಲ್ಲಾಳ್, ಮನೋಹರ್ ರಾಜೀವ್, ಕೃಪಾ ಆಳ್ವಾ, ವಿಸ್ವಾಶ್ ದಾಸ್, ಪಿವಿ ಮೋಹನ್ ಉಪಸ್ಥಿತರಿದ್ದರು.