
Mangalore: ಆಟಿಸಂ ಮಕ್ಕಳ ತರಬೇತಿ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟನೆ
Sunday, February 11, 2024
ಮಂಗಳೂರು: ಯಶ ವಿಶೇಷ ಆಟಿಸಂ ಮಕ್ಕಳ ತರಬೇತಿ ಕೇಂದ್ರ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ವೈ. ಶೆಟ್ಟಿ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ದೈಹಿಕ ನ್ಯೂನತೆ ಹೊಂದಿರುವವರು ನಿಷ್ಕಲ್ಮಶ ಮನಸ್ಸಿನವರಾಗಿರುವುದರಿಂದ ದೇವರ ಮಕ್ಕಳೆಂದು ತಿಳಿಯಲಾಗುತ್ತದೆ. ಸಮಾಜದ ಯಾವ ವ್ಯಕ್ತಿಯು ಇಂತಹ ಮಕ್ಕಳನ್ನು ಅಸಡ್ಡೆಯಿಂದ ಕಾಣದೆ ಎಲ್ಲರಂತೆ ಪ್ರೀತಿಯಿಂದ ಆದರಿಸಬೇಕು ಎಂದು ಹೇಳಿದರು.
ಎಲ್ಲಾ ಅಂಗಾಂಗಗಳು ಸರಿಯಾಗಿರುವ ವ್ಯಕ್ತಿಗಳೇ ಮಾದಕ ವ್ಯಸನಕ್ಕೆ ಬಲಿಯಾಗಿ ಸಮಾಜಕ್ಕೆ ಕಂಠಕರಾಗುತ್ತಿರುವ ಈ ಕಾಲಘಟ್ಟದಲ್ಲಿ ವಿಶೇಷ ಚೇತನ ಮಕ್ಕಳು ಸಮಾಜದಲ್ಲಿ ಏನನ್ನಾದರೂ ಸಾಧಿಸುವ ಹಠ ಹೊಂದಿರುವುದು ಪ್ರಶಂಶನೀಯ ಎಂದರು.
ಯಶ ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿಗಳು ಮತ್ತಿತರರು ಉಪಸ್ಥಿತರಿದ್ದರು.