
Mangalore: ಹಾಸ್ಟೆಲ್‌ಗಳಲ್ಲಿ ಶುಚಿತ್ವದೊಂದಿಗೆ ಕಡ್ಡಾಯ ನಿಯಮವನ್ನು ಪಾಲಿಸುವಂತೆ ಆರೋಗ್ಯ ಅಧಿಕಾರಿ ಸೂಚನೆ
ಮಂಗಳೂರು: ಬೇಸಿಗೆ ಕಾಲ ಆರಂಭವಾಗಿದ್ದು, ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ವಾಂತಿ, ಬೇದಿ, ಜ್ವರ, ಹೊಟ್ಟೆನೊವು ಇಂತಹ ಲಕ್ಷಣಗಳಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಹಾಸ್ಟೆಲ್‌ಗಳಲ್ಲಿ ಶುಚಿತ್ವದೊಂದಿಗೆ, ಕೆಲವೊಂದು ಕಡ್ಡಾಯ ನಿಯವಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ ಹಾಸ್ಟೆಲ್‌ನ ಮಾಲಕರಿಗೆ ಸೂಚಿಸಿದರು.
ಅವರು ಫೆ.12 ರಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಹಾಸ್ಟೆಲ್‌ಗಳಲ್ಲಿ ನೀರಿನ ಮೂಲಗಳನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಸ್ಚಚ್ಛಗೊಳಿಸಬೇಕು. ನೀರಿನ ಶುದ್ಧಿಕರಣ ಯಂತ್ರವನ್ನು ಸರಿಯಾದ ಸಮಯಕ್ಕೆ ನಿರ್ವಹಿಸಬೇಕು. ಎಲ್ಲಾ ಹಾಸ್ಟೆಲ್‌ಗಳಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿಗಳು ನೀರನ್ನು ೩ ತಿಂಗಳಿಗೊಮ್ಮೆ ಪರಿಶೀಲಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಹಾಸ್ಟೆಲ್‌ನ ಮಾಲಕರು ಆಹಾರ ಸಂರಕ್ಷಣೆ ಗುಣಮಟ್ಟ ಮತ್ತು ಪ್ರಾಧಿಕಾರದಿಂದ ನೊಂದಣಿ ಅಥವಾ ಲೈಸನ್ಸ್ ಪಡೆದುಕೊಳ್ಳಬೇಕು. ಅಡುಗೆ ಕೋಣೆಯನ್ನು ಹೊಂದಿರುವ ಹಾಸೆಲ್, ಪಿ.ಜಿ.ಗಳು ಕಡ್ಡಾಯವಾಗಿ ಲೈಸನ್ಸ್ ಪಡೆದುಕೊಳ್ಳಬೇಕು. ಹೊರಗಿನಿಂದ ಹಾಗೂ ಕ್ಯಾಟರಿಂಗ್ ಮೂಲಕ ಆಹಾರವನ್ನು ತರಿಸುವವರು ತಮ್ಮಗಳ ನಡುವೆ ಕರಾರು ಮಾಡಿಸಿಕೊಂಡಿರಬೇಕು ಎಂದು ಸೂಚಿಸಿದರು.
ಈಗಾಗಲೇ 25 ಅಂಶಗಳಿರುವ ನಿಯಮಗಳಿರುವ ಪಟ್ಟಿಯನ್ನು ಎಲ್ಲಾ ಹಾಸ್ಟೆಲ್, ಇಸ್ಕಾನ್, ಪಿ.ಜಿ. ಆಹಾರ ತಯರಿಸುವ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಂದಿನ 2 ದಿನಗಳಲ್ಲಿ ಅವರು ಯಾವ ಕ್ರಮವನ್ನು ಕೈಗೊಂಡಿದ್ದಾರೆ ಎಂಬುವುದರ ಬಗ್ಗೆ ನಮಗೆ ಮರಳಿ ತಿಳಿಸಬೇಕು ಎಂದು ಸೂಚಿಸಿದರು.
"ಫೆ.13: ಹಾಸ್ಟೆಲ್ ಮಾಲಿಕರ ಸಭೆ:
ಫೆ.13 ರಂದು ಎಲ್ಲಾ ಹಾಸ್ಟೆಲ್, ಪಿ.ಜಿ. ಮಾಲಕರ, ಹಿಂದುಳಿದ ಇಲಾಖೆಯ ಉಪನಿರ್ದೇಶಕರು, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೆಶಕರು, ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ.
ವರದಿಯಲ್ಲಿ ಲೋಪ ಕಂಡುಬಂದಲ್ಲಿ ದಂಡ:
ಇತ್ತೀಚಿನ ದಿನಗಳಲ್ಲಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ಆರೋಗ್ಯ ಹಾಳಾಗುತ್ತಿದ್ದು, ಮೊನ್ನೆ ವಳಚಿಲ್‌ನಲ್ಲಿರುವ ಶ್ರೀನಿವಾಸ ಸಮೂಹ ಸಂಸ್ಥೆಯಲ್ಲಿ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಭಾನುವಾರ ರಾತ್ರಿ ಅಥೇನಾ ಕಾಲೇಜ್ ಆಫ್ ನರ್ಸಿಂಗ್‌ನ ಕದ್ರಿ ಹಾಸ್ಟೆಲ್‌ನ 10 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಆ ಸಂಸ್ಥೆಗಳ ಆಹಾರ, ನೀರು ಹಾಗೂ ವಿದ್ಯಾರ್ಥಿಗಳನ್ನು ಪರಿಶೀಲಿಸಿದ್ದು, ಶ್ರೀನಿವಾಸ ಸಮೂಹ ಸಂಸ್ಥೆಯ ಹಾಸ್ಟೆಲ್‌ನ್ನು ಮುಚ್ಚಲಾಗಿದ್ದು, ವರದಿ ಬಂದ ನಂತರ ಮತ್ತೊಮ್ಮೆ ಪರಿಶೀಲಿಸಿ ಹಾಸ್ಟೆಲ್ ತೆರೆಯಲು ಅನುಮತಿ ನೀಡಲಾಗುವುದು. ವರದಿಯಲ್ಲಿ ಲೋಪ ಇರುವುದು ಕಂಡುಬಂದಲ್ಲಿ ಕೇಸ್ ದಾಖಲಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ಡಾ. ಹೆಚ್.ಆರ್. ತಿಮ್ಮಯ್ಯ, ಜಿಲ್ಲಾ ಆರೋಗ್ಯ ಅಧಿಕಾರಿಗಳು, ದ.ಕ.
ಸಿಟಿ ಆಸ್ಪತ್ರೆಯ ಹಾಸ್ಟೆಲ್ ಮೇಲೆ ಕೇಸು ದಾಖಲು:
ಕಳೆದ ವರ್ಷ ಸಿಟಿ ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿದ್ದು, ಈ ಕುರಿತಾಗಿ ಅಜಾಗರುಕತೆಯ ವಿಚಾರದಲ್ಲಿ ಕೇಸು ದಾಖಲಾಗಿದ್ದು, ಈಗ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. -ಡಾ. ಪ್ರವೀಣ್ ಕುಮಾರ್, ಜಿಲ್ಲಾ ಅಂಕಿತ ಅಧಿಕಾರಿ, ದ.ಕ."