
Mangalore: ಪ್ರತ್ಯಕ್ಷ ಕುಮಾರ್ ಅಂತರ್‌ರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್
Tuesday, February 13, 2024
ಮಂಗಳೂರು: ಯೋಗಾಸನದಲ್ಲಿ ಮಂಗಳೂರಿನ ಪ್ರತ್ಯಕ್ಷ ಕುಮಾರ್ ಅಂತರ್‌ರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ಹೊಸ ಸಾಧನೆಯನ್ನು ಮಾಡಿದ್ದಾರೆ.
ಅವರು ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಡಾ. ರಂಗಪ್ಪ ನೇತೃತ್ವದ ಆರೋಗ್ಯಧಾಮ ಯೋಗ ವಿದ್ಯಾಟ್ರಸ್ಟ್‌ನ ಅಂಗ ಸಂಸ್ಥೆ ತಪಸ್ವಿ ಯೋಗ ಕೇಂದ್ರವು ಆಯೋಜಿಸಿದ ಬುಕ್ ಆಫ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಪದ್ಮಾ ಶೀರ್ಶಾಸನ ಭಂಗಿಯ ಈ ಹಿಂದಿನ 16 ನಿಮಿಷ 14 ಸೆಕೆಂಡ್ ರೆಕಾರ್ಡ್‌ನ್ನು ಮುರಿದು 35 ಇಮಿಷ 34 ಸೆಕೆಂಡ್‌ನ ನೂತನ ದಾಖಲೆಯನ್ನು ಬರೆದು ಅಂತರ್‌ರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದಾರೆ.
ಇವರು ಚಂದ್ರಶೇಖರ್ ಹೆಗ್ಡೆ ಮತ್ತು ಸುರೇಖ ಹೆಗ್ಡೆ ಅವರ ಪುತ್ರ. ಸಧ್ಯ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ವಿಜ್ಞಾನ ವಿಭಾಗದಲ್ಲಿ ಎಂ.ಎಸ್ಸಿ. ಪದವಿ ಪಡೆಯುತ್ತಿದ್ದಾರೆ.