Moodubidire: ಶ್ರೀನಿವಾಸ ಗೌಡರ ಯಶೋಗಾಥೆ "ಕಂಬಳ ಶ್ರೀ"  ಕೃತಿ ಬಿಡುಗಡೆ

Moodubidire: ಶ್ರೀನಿವಾಸ ಗೌಡರ ಯಶೋಗಾಥೆ "ಕಂಬಳ ಶ್ರೀ" ಕೃತಿ ಬಿಡುಗಡೆ


ಮೂಡುಬಿದಿರೆ : ಕಂಬಳ ಓಟಗಾರ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡರ ಜೀವನ ಯಶೋಗಾಥೆಯ ಕುರಿತು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಬರೆದಿರುವ  ‘ಕಂಬಳ ಶ್ರೀ’  ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಶನಿವಾರ ಸಮಾಜಮಂದಿರದಲ್ಲಿ  ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಶ್ರೀನಿವಾಸ ಗೌಡರು ಶ್ರಮಜೀವಿಯಾಗಿದ್ದು  ಕಂಬಳ ಓಟದಲ್ಲಿ ಮಾಡಿದ ಸಾಧನೆ ಅಗಾಧವಾದುದು. ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದಾಗಿ ಸಿನೆಮಾ, ರೂಪದರ್ಶಿಯ ಸ್ಥಾನಮಾನವೂ ಅವರಿಗೆ ಲಭಿಸಿದೆ. ಗೆಲುವಿಗೆ ಹಿಗ್ಗದೆ, ಸೋಲಿಗೆ ಕುಗ್ಗದ ವ್ಯಕ್ತಿತ್ವ ಹೊಂದಿದ ಶ್ರೀನಿವಾಸ ಗೌಡರ ಸಾಧನೆಯು ಕೃತಿ ಮೂಲಕ ದಾಖಲೀಕರಣಗೊಂಡಿರುವುದು ಶ್ಲಾಘನೀಯ. ಅವರ ಕುರಿತು ಹೆಚ್ಚಿನ ಅಧ್ಯಯನ ಮಾಡುವವರಿಗೆ ಈ ಕೃತಿ ಪೂರಕವಾಗಲಿದೆ ಎಂದು ಹೇಳಿದರು.

ಜಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀನಿವಾಸ ಗೌಡರು ಕಂಬಳದ ಓಟದಲ್ಲಿ ಸಾಧನೆ ಮಾಡುವ ಮೂಲಕ ಗೌರವ ತಂದಿದ್ದಾರೆ. ಇತಹ ಸಾಧನೆಯನ್ನು ಇನ್ನಷ್ಟು ಓಟಗಾರರು ಮಾಡಬೇಕು ಎಂದರು. ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಶ್ರೀನಿವಾಸ ಗೌಡರ ಯಶೋಗಾಥೆಯನ್ನು ವಿವರಿಸಿದರು. 

ಲೇಖಕಿ ಜಯಂತಿ ಎಸ್ ಬಂಗೇರ, ಉದ್ಯಮಿಗಳಾದ ಅರುಣ್ ಪ್ರಕಾಶ್ ಶೆಟ್ಟಿ, ಸಿ.ಎಚ್. ಗಫೂರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ವಿಠಲ, ಪ್ರೆಸ್‌ಕ್ಲಬ್ ಅಧ್ಯಕ್ಷ ಯಶೋಧರ ಕೋಟ್ಯಾನ್ ಶುಭ ಹಾರೈಸಿದರು. ಪ್ರೇಮಶ್ರೀ ಕಲ್ಲಬೆಟ್ಟು ಸ್ವಾಗತಿಸಿದರು. ಹರೀಶ್ ಕೆ. ಅದೂರು ವಂದಿಸಿ, ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರ್ವಹಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article