Mangalore: ಹಿಂದೂ ಭಾವನೆಗಳಿಗೆ ಧಕ್ಕೆ ಕ್ರಿಶ್ಚಿಯನ್ ಮಿಷನರಿ ಶಾಲೆ ತ್ಯಜಿಸಲು ಸಕಾಲ

Mangalore: ಹಿಂದೂ ಭಾವನೆಗಳಿಗೆ ಧಕ್ಕೆ ಕ್ರಿಶ್ಚಿಯನ್ ಮಿಷನರಿ ಶಾಲೆ ತ್ಯಜಿಸಲು ಸಕಾಲ


ಮಂಗಳೂರು: ಕ್ರಿಶ್ಚಿಯನ್ ಮಿಷಿನರಿ ಶಾಲೆಗಳಲ್ಲಿ ಹಿಂದೂ ವಿರೋಧಿ ಭಾವನೆ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೂ ಸಾಂಪ್ರದಾಯಿಕ ಹೂ ಮುಡಿಯಲು, ಬಳೆ ಹಾಕಲು, ತಿಲಕ ಹಾಕಲು ಹೀಗೆ ಹಲವು ಆಚಾರಗಳನ್ನು ನಮ್ಮ ಹೆಣ್ಣು ಮಕ್ಕಳಿಂದ ದೂರ ಮಾಡಿದ ಕ್ರಿಶ್ಚಿಯನ್ ಮಿಷನರಿಗಳು ಇದೀಗ ರಾಮ ಮಂದಿರದ ವಿರುದ್ಧದ ದ್ವೇಷ ಭಾವನೆ ಪಸರಿಸಲು ಹೂಡುತ್ತಿರುವ ಷಡ್ಯಂತ್ರ ಸಹಿಸಲು ಅಸಾಧ್ಯ. ಸಂಬಂಧಪಟ್ಟ ಶಾಲೆಯ ಶಿಕ್ಷಕಿ ವಿರುದ್ಧ ಆಡಳಿತ ಮಂಡಳಿ ಕ್ರಮ ಜರುಗಿಸಬೇಕು ಇಲ್ಲದಿದ್ದಲ್ಲಿ ತೀವ್ರ ಹೋರಾಟ ಅನಿವಾರ್ಯ ಎಂದು ಡಾ. ಭರತ್ ಶೆಟ್ಟಿ ವೈ. ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ನಗರದ ಜೆರೋಸ ಶಾಲೆಯ ಶಿಕ್ಷಕಿ ಶ್ರೀರಾಮ ಹಾಗೂ ಮಂದಿರದ ವಿರುದ್ಧ ವಿದ್ಯಾರ್ಥಿಗಳ ಮುಂದೆ ಆಡಿದರು ಎನ್ನಲಾದ ಹಿಂದೂ ಭಾವನೆಗೆ ಧಕ್ಕೆ ತರುವ ಮಾತುಗಳನ್ನು ಶಾಸಕರು ಖಂಡಿಸಿದರು.

ಇಂತಹ ಹಿಂದೂ ವಿರೋಧಿ ಶಾಲೆಗಳನ್ನು ತ್ಯಜಿಸಿ, ನಮ್ಮ ಸಂಪ್ರದಾಯಕ್ಕೆ ಮನ್ನಣೆ ನೀಡುವ ಶಾಲಾ, ಕಾಲೇಜುಗಳಿಗೆ ಸೇರಿ ವಿದ್ಯಾಭ್ಯಾಸ ಮಾಡುವ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಬೇಕಿದೆ. ಈ ಬಗ್ಗೆ ಪೋಷಕರು ಚಿಂತಿಸಲು ಇದು ಸಕಾಲ ಎಂದು ಹೇಳಿದರು.

ಕೃಷ್ಣಾಪುರ ಶಾಲೆಯಲ್ಲಿ ರಕ್ಷಾ ಬಂಧನ ಕಿತ್ತು ಎಸೆಯಲಾಯಿತು. ಇದೀಗ ರಾಮನ ಕುರಿತಂತೆ ನಿಂದನೆ ಸಹಿಸಲು ಅಸಾಧ್ಯ. ಇದೇ ಜೀಸಸ್ ಹಾಗೂ ಅವರ ಮೂರ್ತಿ ಪೂಜೆಯ ಬಗ್ಗೆ ಮಾತನಾಡಿದರೆ ಇಷ್ಟರವರೆಗೆ ಡೋಂಗಿ ಜಾತ್ಯಾತೀತ ಹೋರಾಟಗಾರರು ಬೀದಿಗೆ ಬರುತ್ತಿದ್ದರು. ಕಾಂಗ್ರೆಸ್ ಪಕ್ಷದ ನಾಯಕರೂ ಕೂಡ ಮೌನ ವಹಿಸಿದ್ದು, ಹಿಂದೂ ವಿರೋಧಿ ಭಾವನೆಯನ್ನು ತೋರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article