
Mangalore: ಕಾರ್ಯಕರ್ತರ ಆಗ್ರಹಕ್ಕೆ ಬಿಜೆಪಿ ಅಭ್ಯರ್ಥಿಯಾಗಲು ಬಯಸಿದ್ದೇನೆ
ಬಂಟ್ವಾಳ: ರಾಜಿಕೀಯ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶವಿದ್ದಾಗ ಕೂಡ ದೂರ ಉಳಿದು ಬಿಟ್ಟವನು ನಾನು ಆದರೆ ಈ ಬಾರಿ ಕಾರ್ಯಕರ್ತ ಒತ್ತಾಸೆಯ ಮೇರೆಗೆ ಭಾರತೀಯ ಜನತಾ ಪಕ್ಷದ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರ ಆಗ್ರಹಕ್ಕೆ ಜೊತೆಯಾಗಿದ್ದೇನೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.
‘ಈ ಬಾರಿ ನಮ್ಮ ಆಯ್ಕೆ ಸತ್ಯಜಿತ್ ಸುರತ್ಕಲ್’ ಎಂಬ ಹೆಸರಿನಲ್ಲಿ ದ.ಕ. ಜಿಲ್ಲಾ ಅಭಿಮಾನಿ ಬಳಗದ ಬಂಟ್ವಾಳ ತಾಲೂಕು ಘಟಕದ ಪುದು ಗ್ರಾಮದ ನಡುಬೈಲ್ ಎಂಬಲ್ಲಿ ಭಾನುವಾರ ನಡೆದ ಪ್ರಮುಖ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
21ನೇ ವಯಸ್ಸಿನಲ್ಲಿ ಹಿಂದೂ ಸಮಾಜದ ಏಳಿಗೆಗೆ ಹೋರಾಟಕ್ಕೆ ಇಳಿದು ಕಾರ್ಯಕರ್ತ ನೋವಿಗೆ ಧ್ವನಿಯಾಗಿದ್ದೇನೆ ಅದೆಷ್ಟೋ ಬಾರಿ ಜೈಲು, ಲಾಠಿ ಚಾರ್ಜು, ಪೆಟ್ಟು, ನೋವು, ಸಂಕಟ ಅನುಭವಿಸಿದ್ದೇನೆ, ಯಾವತ್ತೂ ಹಿಂದೂ ಸಮಾಜದ ವಿರುದ್ಧ ಹೋಗಿಲ್ಲ, ನನ್ನದು ರಾಜಕೀಯಕ್ಕಾಗಿ ಹೋರಾಟ ಅಲ್ಲ ಎಂದ ಅವರು ಈ ಸಲ ಹಿಂದೂ ಸಮಾಜದ ಉನ್ನತಿಗೆಗಾಗಿ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಚುನಾವಣೆಗೆ ಸ್ಪರ್ದಿಸುವುದಾಗಿ ಹೇಳಿದರು.
ರಮೇಶ್ ವಗ್ಗ ಪ್ರಾಸ್ತವಿಕವಾಗಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತರಾದ ನಾಗಪ್ಪ ಕಬೇಲ, ಜಗದೀಶ ಬಂಗೇರ ಹೊಳ್ಳರಬೈಲು, ಸುರೇಶ ನಡುಬೈಲು, ಸಂತೋಷ ಕುಮಾರ್ ನೆತ್ತರಕೆರೆ, ಸತ್ಯೇಶ್ ಭಟ್ ಹೊಯ್ಗೆಗದ್ದೆ, ಪ್ರಮುಖರಾದ ಶಂಕರ್ ಭಟ್ ಹೊಯ್ಗೆಗದ್ದೆ, ಸಂತೋಷ್ ಪೊಳಲಿ, ಕಮಲಾಕ್ಷ ಧನುಪೂಜೆ, ಪ್ರವೀಣ್ ಬೆಂಜನಪದವು, ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು. ಸಂತೋಷ್ ಕುಲಾಲ್ ನತ್ತರಕೆರೆ ಸ್ವಾಗತಿಸಿ, ವಂದಿಸಿದರು.