Moodubidire: ಶ್ರೀ ಹಿರೇ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬಪ್ರತಿಷ್ಠಾ ಮಹೋತ್ಸವ ಪಲ್ಲಕ್ಕಿಯಲ್ಲಿ 24 ತೀರ್ಥಂಕರರ ಪುರಮೆರವಣಿಗೆ

Moodubidire: ಶ್ರೀ ಹಿರೇ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬಪ್ರತಿಷ್ಠಾ ಮಹೋತ್ಸವ ಪಲ್ಲಕ್ಕಿಯಲ್ಲಿ 24 ತೀರ್ಥಂಕರರ ಪುರಮೆರವಣಿಗೆ


ಮೂಡುಬಿದಿರೆ: ಇಲ್ಲಿನ ಜೈನಪೇಟೆಯಲ್ಲಿರುವ ಶ್ರೀ ಹಿರೇ ಅಮ್ಮನವರ ಬಸದಿಯಲ್ಲಿ ನಡೆಯುವ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವದ ಅಂಗವಾಗಿ ಭಾನುವಾರ ಸಾಯಂಕಾಲ ಪಲ್ಲಕ್ಕಿಯಲ್ಲಿ 24 ತೀರ್ಥಂಕರರ ಪುರಮೆರವಣಿಗೆ ನಡೆಯಿತು.

ಶ್ರವಣಬೆಳಗೋಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಮೂಡುಬಿದಿರೆಯ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹಾಗೂ ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಚಾಲನೆ ನೀಡಿದರು. 

ಬಸದಿಯಿಂದ ಆರಂಭಗೊಂಡ ಪುರಮೆರವಣಿಗೆಯು ಮೂಡುಬಿದಿರೆ ಪೇಟೆಯ ಮುಖ್ಯ ಬೀದಿಯಲ್ಲಿ ಸಾಗಿ ಬಂತು.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೆ.ಅಭಯಚಂದ್ರ ಜೈನ್, ಪ್ರಧಾನ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ, ಸಮಿತಿಯ ಪದಾಧಿಕಾರಿಗಳು, ಆಡಳಿತದಾರ ಭಾಸ್ಕರ್ ಎಸ್.ಕಟ್ಟೆಮಾರ್, ಅನಂತಕೇಸರಿ ಕಟ್ಟೆಮಾರ್, ಪುರೋಹಿತರಾದ ಜಯವರ್ಮ ಇಂದ್ರ, ಗುಣವರ್ಮ ಇಂದ್ರ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ, ಸುಚರಿತ ಶೆಟ್ಟಿ ಮತ್ತಿತರರಿದ್ದರು.

ಮೂರು ಸಾವಿರಕ್ಕೂ ಅಧಿಕ ಮಂದಿ ಪುರಮೆರವಣಿಗೆಯಲ್ಲಿ ಪಾಲ್ಗೊಂಡರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article