Mangalore: ಆದಿತ್ಯ ಮುಕ್ಕಾಲ್ದಿ' ಅವರಿಗೆ ನುಡಿನಮನ
Saturday, February 24, 2024
ಬೈಕಂಪಾಡಿ: ಸುರತ್ಕಲ್ ಸಮೀಪದ ಚೇಳ್ಯಾರು ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಗಡಿಪ್ರಧಾನರಾದ 'ಖಂಡಿಗೆಬೀಡು ಆದಿತ್ಯ ಮುಕ್ಕಾಲ್ದಿ'ಯವರು ದೈವಾಧೀನರಾಗಿದ್ದು, ಅವರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮವು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕುಡುಂಬೂರು ನಡುಗಿರಿ ಗ್ರಾಮ ದೈವ ಜಾರಂದಾಯ ಹಾಗೂ ಸಪರಿವಾರ ದೈವಸ್ಥಾನದಲ್ಲಿ ನೆರವೇರಿತು.
ಕುಡುಂಬೂರು ಊರಿನ ಹತ್ತು ಸಮಸ್ತರು ಮತ್ತು ಕೈಗಾರಿಕ ಉದ್ಯಮಿಗಳು ಸೇರಿ ಸಾರ್ವಜನಿಕ ನುಡಿ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಕುಪ್ಪಿಲಗುತ್ತು ರಾಮನಾಥ್ ರೈ , ಬೈಕಂಪಾಡಿಗುತ್ತು ಸುಭಾಷ್ ಚಂದ್ರ ಶೆಟ್ಟಿ ಹಾಗೂ ಕುಡುಂಬೂರು ನಡುಗಿರಿ ದೈವಸ್ಥಾನದ ಗೌರವ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಧ್ಯಕ್ಷ ಅಶ್ವಿನ್ ಶೇಖ, ನಾಗಣ್ಣ ಶೆಟ್ಟಿ, ಮೋಹನ್ ಶೆಟ್ಟಿ, ಕಾಮೇಶ್ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಉದ್ಯಮಿ ಸುಂದರ್ ಬಿ.ಎಸ್.ಜೆ.ಅರ್. ಗ್ರೂಪ್, ಊರಿನ ಹತ್ತು ಸಮಸ್ತರು, ಹಿಂದೂ ಯುವ ಸೇನೆ ಕುಡುಂಬೂರು ಹಾಗೂ ಫ್ರೆಂಡ್ಸ್ ಕುಡುಂಬೂರು ಸದಸ್ಯರು ಉಪಸ್ಥಿತರಿದ್ದರು.

