
Mangalore: ಇನಾಯತ್ ಅಲಿ ನೇತೃತ್ವದಲ್ಲಿ ಕಾಂಗ್ರೆಸ್ ಪೂರ್ವಭಾವಿ ಸಭೆ
Sunday, February 11, 2024
ಮಂಗಳೂರು: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯು ಫೆ.11 ರಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಅವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಫೆ.17 ರಂದು ಮಂಗಳೂರಿನಲ್ಲಿ ಜರಗುವ ರಾಜ್ಯಮಟ್ಟದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ಕಾರ್ಯಕ್ರಮ ಯಶಸ್ವಿಗೊಳಿಸುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಗಳಾದ ಕಲಗೋಡು ರತ್ನಾಕರ, ಎಂ.ಎ. ಗಫೂರ್, ಕೆ.ಪಿ.ಸಿ.ಸಿ. ಸದಸ್ಯ ಸದಾಶಿವ ಶೆಟ್ಟಿ, ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಶುಭೋದಯ ಆಳ್ವ, ಬ್ಲಾಕ್ ಉಸ್ತುವಾರಿ ಗಿರೀಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೀರಜ್ ಪಾಲ್, ಸ್ಟೇನಿ ಅಳ್ವಾರಿಸ್, ಬ್ಲಾಕ್ ಕಾಂಗ್ರೆಸ್‌ನ ಪದಾಧಿಕಾರಿಗಳಾದ ಬಶೀರ್ ಬೈಕಂಪಾಡಿ, ಗೋವರ್ಧನ ಶೆಟ್ಟಿಗಾರ್, ರಾಘವೇಂದ್ರ ರಾವ್, ಹೇಮಂತ್, ವಿಠಲ್ ಶೆಟ್ಟಿಗಾರ್, ಚಂದ್ರಹಾಸ ಪೂಜಾರಿ, ಮೊಹಮ್ಮದ್ ಶಮೀರ್, ಗುಲ್ಜಾರ್ ಬಾನು, ಸುಂದರ ಶೆಟ್ಟಿ, ಅಯಾಜ್, ಜೈಸನ್, ಅಬ್ದುಲ್ ಜಲೀಲ್, ಜಲೀಲ್ ಬದ್ರಿಯಾ, ನವೀನ್ ಶೆಟ್ಟಿ, ಆನಂದ ಪಡ್ರೆ, ವಾರ್ಡ್ ಹಾಗೂ ಬೂತ್ ಮಟ್ಟದ ಅಧ್ಯಕ್ಷರು ಮತ್ತು ಪಧಾದಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ರೆಹಮಾನ್ ಖಾನ್ ಕುಂಜತ್ತಬೈಲ್ ಸ್ವಾಗತಿಸಿ, ರಾಜೇಶ್ ಕುಳಾಯಿ ವಂದಿಸಿದರು.