Putturu: ಅಂಬಿಕಾ ವಸತಿ ನಿಲಯಕ್ಕೆ ಎಫ್‌ಎಫ್‌ಎಸ್‌ಎಐ ಪ್ರಮಾಣಪತ್ರ

Putturu: ಅಂಬಿಕಾ ವಸತಿ ನಿಲಯಕ್ಕೆ ಎಫ್‌ಎಫ್‌ಎಸ್‌ಎಐ ಪ್ರಮಾಣಪತ್ರ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗೆ ಪುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯಿಂದ ಪ್ರಮಾಣಪತ್ರ ದೊರೆತಿದೆ.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಂಬಿಕಾ ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಹೊಂದಿದ್ದು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾದ ಅತ್ಯಂತ ಶುಚಿ ರುಚಿಯಾದ ಶುದ್ಧ ಸಸ್ಯಾಹಾರಿ ಊಟ ಉಪಹಾರಗಳ ವ್ಯವಸ್ಥೆಯನ್ನು ಅಂಬಿಕಾ ಹಾಸ್ಟೆಲ್‌ನ ಅಡುಗೆಮನೆ ಒದಗಿಸಿಕೊಡುತ್ತಿದೆ. 

ಇತ್ತೀಚೆಗಷ್ಟೇ ಅಂಬಿಕಾ ಹಾಸ್ಟೆಲ್‌ಗೆ ಸಂಬಂಧಿಸಿದಂತೆ ನೂತನ ಹಾಗೂ ಅತ್ಯಾಧುನಿಕ ವ್ಯವಸ್ಥೆಯ ಅಡಿಗೆ ಮನೆಯನ್ನು ನಿರ್ಮಿಸಿದ್ದು, ಆಹಾರದ ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಇದೀಗ ಆಹಾರದ ಗುಣಮಟ್ಟವನ್ನು ಪ್ರಮಾಣೀಕರಿಸುವ ಸರ್ಕಾರದ ಎಫ್‌ಎಫ್‌ಎಸ್‌ಎಐ ಪ್ರಮಾಣಪತ್ರವೂ ದೊರೆತಿರುವುದು ಗುಣಮಟ್ಟಕ್ಕೆ ಅಧಿಕೃತ ಮುದ್ರೆಯನ್ನೊದಗಿಸಿಕೊಟ್ಟಂತಾಗಿದೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article