Bantwal: ಬೂಡಾ ನೂತನ ಅಧ್ಯಕ್ಷ ಹಾಗೂ ಮೂವರು ಸದಸ್ಯರ ಅಧಿಕಾರ ಸ್ವೀಕಾರ
ಬಂಟ್ವಾಳ: ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ(ಬೂಡಾ) ನೂತನ ಅಧ್ಯಕ್ಷ ಬೇಬಿಕುಂದರ್ ಹಾಗೂ ಮೂವರು ಸದಸ್ಯರು ಶನಿವಾರ ಬಿ.ಸಿ.ರೋಡಿನಲ್ಲಿರುವ ಯೋಜನಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ನೂತನ ಅಧ್ಯಕ್ಷರ ಕೊಠಡಿಯನ್ನು ಉದ್ಘಾಟಿಸಿ ನೂತನ ಅಧ್ಯಕ್ಷ ಹಾಗೂ ಸದಸ್ಯರಿಗೆ ಶುಭಹಾರೈಸಿ ನಗರದ ಅಭಿವೃದ್ಧಿಗೆ ಯೋಜನಾ ಪ್ರಾಧಿಕಾರ ಮಹತ್ವದ್ದಾಗಿದೆ ಎಂದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಬೇಬಿಕುಂದರ್ ಬಂಟ್ವಾಳ ನಗರದ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸಲಾಗುವುದು, ಕಚೇರಿಗಾಗಮಿಸುವ ಜನಸಾಮಾನ್ಯರಿಗೆ ಅತ್ಯಂತ ಸರಳವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ನೂತನ ಸದಸ್ಯರಾದಮನೋಹರ ಕುಲಾಲ್ ನೇರಂಬೋಳ್, ಹರೀಶ್ ಅಜ್ಜಿಬೆಟ್ಟು, ಅಬ್ದುಲ್ ರಜಾಕ್ ಗೂಡಿನಬಳಿ,ಕಾರ್ಯದರ್ಶಿ ಅಭಿಲಾಷ್, ಭಾರತಿ ಬಿ.ಕುಂದರ್ ಉಪಸ್ಥಿತರಿದ್ದರು.
ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಡಿ, ಬೂಡಾ ಮಾಜಿ ಅಧ್ಯಕ್ಷರಾದ ಪಿಯೂಸ್ ಎಲ್. ರೋಡ್ರಿಗಸ್, ಸದಾಶಿವ ಬಂಗೇರ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಸಿಂಡಿಕೇಟ್ ಸದಸ್ಯ ಸುರೇಶ್ ಕುಲಾಲ್, ಪುರಸಭಾ ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಲೋಲಾಕ್ಷ ಶೆಟ್ಟಿ, ಜೆಸಿಂತಾ ಡಿಸೋಜ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಪಕ್ಷದ ಪ್ರಮುಖರಾದ ಅಶ್ವನಿಕುಮಾರ್ ರೈ, ಪದ್ಮನಾಭ ರೈ,
ವೆಂಕಪ್ಪ ಪೂಜಾರಿ ಬಂಟ್ವಾಳ, ಸುದೀಪ್ ಕುಮಾರ್ ರೈ, ಸಂಜೀವ ಪೂಜಾರಿ ಬೊಳ್ಳಾಯಿ, ಮಲ್ಲಿಕಾ ಶೆಟ್ಟಿ, ಸುರೇಶ್ ಜೋರ, ಸುಧಾಕರ ಶೆಣೈ ಖಂಡಿಗ, ಶೈಲಜಾ ರಾಜೇಶ್, ಸುಭಾಶ್ಚಂದ್ರ ಶೆಟ್ಟಿ, ನಾರಾಯಣ ನಾಯ್ಕ್ ಮತ್ತಿತರರು ಇದ್ದರು.