Konaje: ಗಾಂಜಾ ಆರೋಪಿ ಬಂಧನ
ಕೊಣಾಜೆ: ಇಲ್ಲಿನ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ಬೋಳ ಲವ ಕುಶ ಕಂಬಳ ಮೈದಾನದಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು, 20 ಸಾವಿರ ಮೌಲ್ಯದ 998 ಗ್ರಾಂ ಗಾಂಜಾ ಹಾಗೂ ಆಕ್ಟಿವಾ ಸ್ಕೂಟರ್‌ನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೂಲತಃ ಕಾಟಿಪಳ್ಳ ನಿವಾಸಿ, ಪ್ರಸಕ್ತ ನೆತ್ತಿಲಪದವಿನಲ್ಲಿ ವಾಸವಿರುವ ಉಮ್ಮರ್ ಫಾರೂಕ್ ಯಾನೆ ಮಂಗಳ್ ಫಾರೂಕ್ ಯಾನೆ ಕುಞಿಮೋನು ಎಂಬಾತನನ್ನು ಬಂಧಿಸಿದ್ದಾರೆ.
ಕೊಣಾಜೆ ಠಾಣಾ ಪಿ.ಎಸ್.ಐ ಪುನೀತ್ ಗಾಂವಕಾರ್‌ರವರಿಗೆ ಲಭಿಸಿದ ಮಾಹಿತಿಯಂತೆ ಈ ದಾಳಿ ನಡೆಸಿದ್ದು, ದಾಳಿ ವೇಳೆ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 522800 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಐ.ಪಿ.ಎಸ್.ರವರ ಮಾರ್ಗದರ್ಶನದಂತೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್‌ಕುಮಾರ್ ಅವರ ನಿರ್ದೇಶನದಂತೆ, ಎ.ಸಿ.ಪಿ. ಧನ್ಯ ಎನ್. ನಾಯಕ್ ಅವರ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರವೀದ್ರ ಸಿ.ಎಂ., ಪೊಲೀಸ್ ಉಪ ನಿರೀಕ್ಷಕರುಗಳಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ಯಲ್ಲಾಲಿಂಗ, ಸಿಬ್ಬಂದಿಗಳಾದ ಎಎಸ್‌ಐ ಸಂಜೀವ್, ಎಚ್.ಸಿ. ರಾಮ ನಾಯ್ಕ್, ವಿನ್ಸಂಟ್ ರೋಡ್ರಿಗಸ್, ಡಬ್ಲ್ಯೂಎಚ್‌ಸಿ ರೇಶ್ಮಾ, ಸಿಬ್ಬಂದಿ ಮಂಜುನಾಥ್, ಬಸವನಗೌಡ, ಬಸಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.