Mangalore: ಲೋಕಸಭಾ ಚುನಾವಣೆ, ನೀತಿ ಸಂಹಿತೆ ಜಾರಿ: ಜಿಲ್ಲೆಯಾಧ್ಯಂತ 23 ಚೆಕ್‌ಪೋಸ್ಟ್‌ಗಳು
ಮಂಗಳೂರು: ಮಾ.16 ರ ಮಧ್ಯಾಹ್ನ 3 ಗಂಟೆಯಿಂದ ನೀತಿ ಸಂಹಿತೆ ಜಾರಿಯಾಗಿದ್ದು, ಜೂ.6 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಕಟ್ಟುನಿಟ್ಟಿನ ಕ್ರಮಕ್ಕಾಗಿ ಜಿಲ್ಲೆಯಾಧ್ಯಂತ 23 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ಹೇಳಿದರು.
ಅವರು ಮಾ.16 ರಂದು ತಮ್ಮ ಕಚೇರಿಯ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಅಕ್ರಮ ಹಣ, ಮಧ್ಯ ಮೊದಲಾದವುಗಳನ್ನು ತಡೆಯುವ ನಿಟ್ಟಿನಲ್ಲಿ ಚೆಕ್ಕಕೋಸ್ಟ್‌ಗಳನ್ನು ನಿರ್ಮಿಸಿದ್ದು, ಮಾ.17 ರ ಬೆಳಿಗ್ಗಿನಿಂದಲೇ ತಪಾಸಣೆ ಪ್ರಾರಂಭವಾಗಲಿದೆ. ಈಗಾಗಲೇ ಚುನಾವಣೆಯನ್ನು ನಿರ್ವಹಿಸಲು ವೀಡಿಯೋ ಸರ್ವಲೆನ್ಸ್ ತಂಡ, ಫೈಯಿಂಗ್ ಸ್ಕ್ವಾಡ್, ಸ್ಟ್ಯಾಟಟಿಕ್ ಸರ್ವಲೆನ್ಸ್ ತಂಡ, ಸೆಕ್ಟರ್ ಆಫಿಸರ?ಸ್, ವೀಡಿಯೋ ವೀವಿಂಗ್ ತಂಡ, ಎಂಸಿಸಿ ತಂಡ ಅಕೌಂಟಿಂಗ್ ತಂಡ ವೀಕ್ಷಕ ತಂಡ ಇಂದಿನಿಂದಲೇ ಕಾರ್ಯಚರಿಸುತ್ತಿದೆ ಎಂದು ತಿಳಿಸಿದರು.
ಮಾ.28 ರಂದು ಚುನಾವಣೆ ಸೋಟೀಸು ಹೊರಡಿಸಲಿದ್ದು, ಏ.4 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ.5 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.8 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಏ.26 ರಂದು ಚುನಾವಣೆ ನಡೆಯಲಿದ್ದು, ಜೂ.4 ರಂದು ಮತ ಎಣಿಕೆ ನಡೆಯಲಿದೆ ಎಂದ ಅವರು ಮಾ.28 ರಿಂದ ಏ.4 ರವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರವನ್ನು ಸಲ್ಲಿಸಬಹುದು ಎಂದು ಹೇಳಿದರು.
ಈ ವರ್ಷ ಜಿಲ್ಲೆಯಲ್ಲಿ 1796826 ಮಂದಿ ಮತದಾರರಿದ್ದು, ಇದರಲ್ಲಿ 877438 ಮಂದಿ ಪುರುಷ ಮತದಾರರಿದ್ದು, 919321 ಮಂದಿ ಮಹಿಳಾ ಮತದಾರರು, 67 ತೃತಿಯ ಲಿಂಗಿಯ ಮತದಾರರು ಮತಚಲಾಯಿಸಲಿದ್ದು, ಇದರಲ್ಲಿ 35689 ಮಂದಿ ಯುವ ಮತದಾದರರು ಈ ವರ್ಷ ಮತ ಚಲಾಯಿಸಲಿದ್ದಾರೆ. 13159 ಮಂದಿ 85 ವರ್ಷ ಮೀರಿದವರು, 8269 ಮಂದಿ 90 ವರ್ಷ ಮೀರಿದವರು, 459 ಮಂದಿ ನೂರು ವರ್ಷ ಮೀರಿದವರು ಹಾಗೂ 14195 ಮಂದಿ ವಿಕಲಚೇತನರು ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
ಈ ವರ್ಷವೂ ೮೫ ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅವಕಾಶವಿದ್ದು, ಅಂತವರು ತಿಳಿಸಿದಲ್ಲಿ ನಾವು ಅಲ್ಲಿತೆ ತೆರಳಿ ಅವರಿಂದ ಮತ ಚಲಾಯಿಸುತ್ತೇವೆ. ಒಮ್ಮೆ ಮತ ಚಲಾಯಿಸಿದ ನಂತರ ಮತ್ತೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವಕಾಶ ಇರುವುದಿಲ್ಲ ಎಂದ ಅವರು ಈ ವರ್ಷ ಜಿಲ್ಲೆಯಲ್ಲಿ 1876 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 2 ಮತಗಟ್ಟೆಗಳ ಕಟ್ಟಡ ಬದಲಾಗಿದ್ದು, ಕೆಲವು ಮತಗಟ್ಟೆಗಳ ಹೆಸರು ಬದಲಾಗಿದೆ ಎಂದರು.
ಮಾ.೨೪ ರ ವರೆಗೆ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳುವವರಿಗೆ ಈ ಚುನಾವಣೆಯಲ್ಲಿ ಮತವನ್ನು ಚಲಾಯಿಸಬಹುದು ಎಂದ ಅವರು ಚುನಾವಣೆ ಕಾರ್ಯಕ್ಕೆ ವಾಹನವನ್ನು ಬಳಸಲು ಅನುಮತಿ ಪಡೆಯುವವರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಅನುಮತಿಯನ್ನು ಪಡೆಯಬೇಕು ಎಂದು ಹೇಳಿದರು.
ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾತನಾಡಿ, ಈಗಾಗಲೇ ನಗರ ಪ್ರದೇಶದಲ್ಲಿ ಶಾಂತಿ ಭಂಗಕ್ಕೆ ಯತ್ನಿಸಿದ 773 ಮಂದಿಯ ಮೇಲೆ ಕ್ರಮ ಕೈಗೊಂಡಿದ್ದು, ಚುನಾವಣೆಗೆ ತೊಂದರೆ ನೀಡುವವರನ್ನು ಗಡಿಪಾರು ಮಾಡಿ ಅವರ ಮೇಲೆ ಗೂಂಡಾ ಕಾಯಿದೆಯನ್ನು ದಾಖಲಿಸಲಾಗುವುದು ಎಂದ ಅವರು ಮೆರವಣಿಗೆ, ಕಾರ್ಯಕ್ರಮಗಳನ್ನು ನಡೆಸುವವರು ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಎಂದು ಸೂಚಿಸಿದರು.
ಪೊಲೀಸ್ ಅಧೀಕ್ಷಕ ಸಿ.ಆರ್. ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ 1068 ಮಂದಿಯ ಮೇಲೆ ಬಾಂಡ್ ಓವರ್ ಕೇಸ್ ದಾಖಲಿಸಿದ್ದು, ರೌಡಿಗಳು, ಹಳೆಯ ರೌಡಿಗಳು, ಚುನಾವಣೆಯ ಸಮಯದಲ್ಲಿ ತೊಂದರೆ ನೀಡಿದವರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಏನೂ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿನ 9000 ಲೈಸನ್ಸ್ ರೈಫಲ್‌ಗಳನ್ನು ವಶಕ್ಕೆ ಪಡೆಯಲಾಗುವುದು ಅರಣ್ಯ ಪ್ರದೇಶದಲ್ಲಿ ವಾಸಿಸುವವರಿಗೆ ಯಾವುದೇ ರೀತಿಯ ರಿಯಾಯಿತಿ ಇರುವುದಿಲ್ಲ. ಕಡ್ಡಾಯವಾಗಿ ರೈಫಲ್‌ನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಬೇಕು ಎಂದು ಹೇಳಿದರು.
ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ. ಮಾತನಾಡಿ, 2019ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 68% ಮತದಾನವಾಗಿದ್ದು, 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 78% ಮತದಾನವಾಗಿದೆ. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ನೀರಿನ ಸಮಸ್ಯೆ ಇದ್ದಲ್ಲಿಗೆ ಟ್ಯಾಂಕರ್ ಮೂಲಕ ಪೂರೈಕೆ:
ಜಿಲ್ಲೆಯಲ್ಲಿ ಇಲ್ಲಿಯ ತನಕ ನೀರಿನ ಸಮಸ್ಯೆ ಕಂಡುಬಂದಿಲ್ಲ. ಸಧ್ಯಕ್ಕೆ ಉಳ್ಳಾಲ, ಕೋಟೆಕಾರ್, ಬಜಪೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಈ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರನ್ನು ವಿತರಿಸಲಾಗುವುದು. ಈಗಾಗಲೇ ಎಎಂಆರ್ ಮತ್ತು ತುಂಬೆ ಡ್ಯಾಂನ ನೀರನ್ನು ಕೃಷಿಗೆ ಬಳಸಬಾರದು ಎಂದು ಆದೇಶ ನೀಡಿದ್ದು, ಕೈಗಾರಿಕೆಗಳಿಗೆ ಮಿತವಾಗಿ ನೀರನ್ನು ಬಳಸುವಂತೆ ಸೂಚಿಸಲಾಗಿದೆ. ನಗರ ಪ್ರದೇಶಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಅಗತ್ಯ ಬಿದ್ದಲ್ಲಿ ರೇಷನಿಂಗ್ ಮಾಡಲಾಗುವುದು. ಜನರು ಸ್ವಯಂ ಜಾಗೃತರಾಗಿ ನೀರನ್ನು ಮಿತವಾಗಿ ಬಳಸಬೇಕು. ಅನವಶ್ಯಕವಾಗಿ ವಾಹನಗಳನ್ನು ತೊಳೆಯಲು ಮತ್ತಿತರ ಕೆಲಸಗಳಿಗೆ ಬಳಸಬಾರದು ಜನರೇ ಯಾಗೃಏತಿಯನ್ನು ವಹಿಸಬೇಕು. -ಮುಲ್ಲೈ ಮುಹಿಲನ್ ಎಂ.ಪಿ., ಜಿಲ್ಲಾಧಿಕಾರಿಗಳು, ದ.ಕ.
ಸಿ-ವಿಜಲ್ ಆಪ್ ಮೂಲಕ ದೂರು ದಾಖಲಿಸಿ:
ಚುನಾವಣೆ ಸಂದರ್ಭದಲ್ಲಿ ಅಕ್ರಮಗಳು ಹಾಗೂ ಯಾರಾದರೂ ಶಾಂತಿ ಭಂಗಕ್ಕೆ ಯತ್ನಿಸುವವರ ವಿರುದ್ಧ ದೂರು ದಾಖಲಿಸಿದರೆ 100 ನಿಮಿಷದೊಳಗೆ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಲಾಗುವು. - ಮುಲ್ಲೈ ಮುಹಿಲನ್ ಎಂ.ಪಿ., ಜಿಲ್ಲಾಧಿಕಾರಿಗಳು, ದ.ಕ.