Mangalore: ಮಾ.28-ಎ.2: ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವ

Mangalore: ಮಾ.28-ಎ.2: ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವ


ಮಂಗಳೂರು: ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವವು ಮಾ.28 ರಿಂದ ಎ.2 ರವರೆಗೆ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮಾ.29 ರಂದು 108 ತೆಂಗಿನಕಾಯಿ ಗಣಹೋಮ ಜರುಗಲಿದೆ. ಮಾ.29-30 ರಂದು ಬೆಳಿಗ್ಗೆ 9.30ಕ್ಕೆ ಸೀರೆ ಏಲಂ ನಡೆಯಲಿದೆ. ಎ.1 ರಂದು ಮಧ್ಯಾಹ್ನ 12 ಗಂಟೆಗೆ ಪೂಜೆಗಾಗಿ ರಥಾರೋಹಣ ಸಂಜೆ 7 ಗಂಟೆಗೆ ರಥೋತ್ಸವ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ಶಯನ. ಎ.2 ರಂದು ಬೆಳಿಗ್ಗೆ 6.34ಕ್ಕೆ ಕವಾಟೋದ್ಘಾಟನೆ ಬೆಳಿಗ್ಗೆ 9.30ಕ್ಕೆ ಹರಕೆಯ ತುಲಭಾರ, ಸಂಜೆ 7 ಗಂಟೆಗೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ, ಎ.3 ರಂದು ಸಂಪ್ರೋಕ್ಷಣೆ, ರಾತ್ರಿ 9 ಗಂಟೆಗೆ ಶ್ರೀ ಕ್ಷೇತ್ರದ ಪರಿವಾರ ದೈವಗಳಿಗೆ ನೇಮೋತ್ಸವ ಜರುಗಲಿದೆ. 

ಜಾತ್ರೋತ್ಸವ ಸಮಯದಲ್ಲಿ ಪ್ರತಿ ದಿನ ಮಧ್ಯಾಹ್ನದ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿ ದಿನ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಉದ್ಘಾಟಿಸಲಿದ್ದಾರೆ. ಮಾ.27 ರಂದು ಧ್ವಜಸ್ತಂಭಕ್ಕೆ ಅಡಿಕೆ ಗೊನೆ ಸಿಯಾಳಗೊನೆ ಬಾಳೆ ಹಣ್ಣಿನ ಗೊನೆ ಒಂದು ಕೊಡುವವರು ಸಂಜೆ ಒಳಗೆ ಕೊಡಬೇಕು. ಎ.1 ರಂದು ಶ್ರೀದೇವಿಯ ಶಯನಕ್ಕ ಹೂಗಳನ್ನು ಸಂಜೆಯೊಳಗೆ ತಂದು ಕೊಡಬಹುದು ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ. ಅರುಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article