Mangalore: 460 ಲೀಟರ್ ಅಕ್ರಮ ಮದ್ಯ ವಶ
Thursday, March 21, 2024
ಮಂಗಳೂರು: 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 21 ರವರೆಗೆ 6,19,369 ರೂ. ಮೌಲ್ಯದ 460 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. 5,43,500 ರೂ.ಗಳ ಮೌಲ್ಯದ 1.7 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
4 ಅಬಕಾರಿ ನಿಯಮ ಉಲ್ಲಂಘನೆ ಹಾಗೂ 5 ಇತರೆ ಸೇರಿದಂತೆ ಒಟ್ಟು 9 ಎಫ್‌ಐಆರ್ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.