Mangalore: 4ನೇ ವರ್ಷದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮ
Sunday, March 17, 2024
ಮಂಗಳೂರು: ವಿಶ್ವಹಿಂದೂ ಪರಿಷದ್ ವತಿಯಿಂದ 4ನೇ ವರ್ಷದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮ ಮಾ.17 ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಕುತ್ತಾರ್ ಕೊರಗಜ್ಜನ ಆದಿಕ್ಷೇತ್ರದ ವರೆಗೆ ಪಾದಯಾತ್ರೆ ನಡೆಯಿತು. ವಿಹೆಚ್‌ಪಿ ಜಿಲ್ಲಾಧ್ಯಕ್ಷ ಹೆಚ್.ಕೆ. ಪುರುಷೋತ್ತಮ, ಜಿಲ್ಲಾ ಸಂಪರ್ಕ ಪ್ರಮುಖ್ ಪ್ರವೀಣ್ ಕುತ್ತಾರ್, ಬಜರಂಗದಳದ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ, ಹಿಂದೂ ಬಾಂಧವರು, ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು.

