Mangalore: ಏ.5-16: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಶಕ್ತಿ ಕ್ಯಾನ್ ಕ್ರಿಯೇಟ್-2024 ಬೇಸಿಗೆ ಶಿಬಿರ
ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ‘ಶಕ್ತಿ ಕ್ಯಾನ್ ಕ್ರಿಯೇಟ್-2024 ಎಂಬ ಬೇಸಿಗೆ ಶಿಬಿರ ನಡೆಯುತ್ತಿದ್ದು, ಈ ಬೇಸಿಗೆ ಶಿಬಿರದಲ್ಲಿ ಎಲ್‌ಕೆಜಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳು ನೋಂದಾಣಿ ಮಾಡಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಶಿಬಿರವು ಏ.5 ರಿದ ಏ.16 ರವರೆಗೆ ಶಕ್ತಿ ವಸತಿ ಶಾಲೆಯಲ್ಲಿ ನಡೆಯಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆ ಇದಾಗಿದ್ದು, ಒಟ್ಟು 5 ಗುಂಪುಗಳನ್ನು ಮಾಡಲಾಗಿದೆ. ಮೊದಲ ಗುಂಪಿನಲ್ಲಿ ಯಕ್ಷಗಾನ, ಕಥಕ್, ಕುಣಿತ ಭಜನೆ, ನೃತ್ಯರೂಪಕ, ಜನಪದ ಮತ್ತು ಭಾವಗೀತೆ, ಅಭಿನಯ ಗೀತೆ, ಭಗವದ್ಗೀತೆ ಪಠಣ ಎರಡನೇ ಗುಂಪಿನಲ್ಲಿ ಸಾರ್ವಜನಿಕ ಭಾಷಣ, ವೇದಗಣಿತ, ಕೃತಕ ಬುದ್ದಿವಂತಿಕೆ, ವೆಬ್ ವಿನ್ಯಾಸ, ಸೌಂದರ್ಯ ಮತ್ತು ಸ್ವಾಸ್ಯ, ಸ್ಟ್ರೀಟ್ ಪ್ಲೇ, ಕಥೆ ಹೇಳುವುದು, ವಿಜ್ಞಾನ ಪ್ರಯೋಗಗಳು, ಮೂರನೇ ಗುಂಪಿನಲ್ಲಿ ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಕರಾಟೆ, ಯೋಗಾ, ಜುಂಬಾ, ಸಾಂಪ್ರದಾಯಿಕ ಆಟಗಳು, ನಾಲ್ಕನೇ ಗುಂಪಿನಲ್ಲಿ ಪಪಿಟ್ ಥಿಯೇಟರ್, ಪೆಟ್ ಜಾಗೃತಿ, ನೇಚರ್ ವಾಕ್, ತೋಟಗಾರಿಕೆ, ಕ್ಷೇತ್ರ ಪ್ರವಾಸ, ಟ್ರೇಷರ್ ಹಂಟ್, ಪ್ರತಿಭಾ ಪ್ರದರ್ಶನ, ಸಾಂಪ್ರದಾಯಿಕ ದಿನ, ಬೆಂಕಿ ಇಲ್ಲದೆ ಅಡುಗೆ, ಚಲನಚಿತ್ರದ ವಿಕ್ಷಣೆ ಐದನೇ ಗುಂಪಿನಲ್ಲಿ ಬರ್ಡ್ ಪೀಡರ್, ರಾಕ್ ಪೇಂಟಿಂಗ್, ಗೊಂಬೆ ತಯಾರಿಕೆ, ಬಾಟಲ್ ಆರ್ಟ್, ಮಂಡಲ ಮತ್ತು ವರ್ಲಿಕಲೆ, ೩ ಡಿ ಕ್ರಾಪ್ಟ್ಸ್, ವಾಲ್ ಹ್ಯಾಂಗಿಂಗ್ಸ್, ಕ್ಲೇ ಆರ್ಟ್, ರಂಗೋಲಿ, ಚಿತ್ರಕಲೆಯನ್ನು ಆಯೋಜಿಸಲಾಗಿದೆ.
ಈ ಶಿಬಿರದ ನೋಂದಾಣಿಯನ್ನು ಆನ್‌ಲೈನ್ ಲಿಂಕ್‌ನಲ್ಲಿ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9148270545 ಸಂಪರ್ಕಿಸಬುದಾಗಿದೆ. ಶಿಬಿರದಲ್ಲಿ ಭಾಗವಹಿಸುವರಿಗೆ ಜ್ಯೂಸ್, ಊಟ ಮತ್ತು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.