Mangalore: ಹಿಂದೂ ಜೀವನ ಪದ್ಧತಿಗೆ ವಿಶ್ವದಲ್ಲಿ ಮನ್ನಣೆ ಸಿಕ್ಕಿದೆ: ಕ್ಯಾ. ಬೃಜೇಶ್ ಚೌಟ

Mangalore: ಹಿಂದೂ ಜೀವನ ಪದ್ಧತಿಗೆ ವಿಶ್ವದಲ್ಲಿ ಮನ್ನಣೆ ಸಿಕ್ಕಿದೆ: ಕ್ಯಾ. ಬೃಜೇಶ್ ಚೌಟ


ಮಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯ ಆದ ಬಳಿಕ ಹಿಂದೂ ಜೀವನ ಪದ್ಧತಿಗೆ ವಿಶ್ವದಲ್ಲಿ ಮನ್ನಣೆ ಸಿಕ್ಕಿದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಹೇಳಿದರು.

ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ  ಅವರು ಮಾತನಾಡಿದರು.

ಚೌಟರ ಎರಡನೇ ಹಂತದ ಪ್ರವಾಸದ ಎರಡನೇ ದಿನವಾದ ಇಂದು ಮುಲ್ಕಿ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಕಿನ್ನಿಗೋಳಿ ಯುಗಪುರುಷ ಹಾಲಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಸಕರಾದ ಉಮಾನಾಥ್ ಕೊಟ್ಯಾನ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಪಕ್ಷದ ಮುಖಂಡರುಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

ನಂತರ ಅವರು ಮುಲ್ಕಿ ಅರಮೆನೆಯ ಅರಸರಾದ ದುಗ್ಗಣ್ಣ ಸಾವಂತರನ್ನು ಮುಲ್ಕಿ ಅರಮನೆಯಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article