Mangalore: ಈಜಲು ಹೋಗಿ ನಿರೂಪಾಲಾಗಿದ್ದ ಮಕ್ಕಳ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಬಾವಾ

Mangalore: ಈಜಲು ಹೋಗಿ ನಿರೂಪಾಲಾಗಿದ್ದ ಮಕ್ಕಳ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಬಾವಾ


ಮಂಗಳೂರು: ಈಜಲು ಹೋಗಿ ನೀರುಪಾಲಾಗಿದ್ದ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಪೋಷಕರಿಗೆ ರಾಜ್ಯ ಸರಕಾರದ ಮುಖ್ಯಮಂತ್ರಿ ಪರಿಹಾರ ನಿಧಿಯ ಪರಿಹಾರದ ಚೆಕ್‌ಗಳನ್ನು ಮಾಜಿ ಶಾಸಕ ಮೊಯ್ದೀನ್ ಬಾವ ಶುಕ್ರವಾರ ವಿತರಿಸಿದರು.

ಶುಕ್ರವಾರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪರಿಹಾರದ ಆದೇಶ ಪ್ರತಿಗಳನ್ನು ಮೃತ ವಿದ್ಯಾರ್ಥಿಗಳ ಪೋಷಕರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳ ಬಗ್ಗೆ ಜಾಗೃತೆ ವಹಿಸಬೇಕು. ಮಕ್ಕಳೊಂದಿಗೆ ಅವರ ಸ್ನೇಹಿತರಂತೆ ವ್ಯವಹರಿಸುವ ಮೂಲಕ ಅವರ ಚಲನ ವಲನಗಳ ಮೆಳೆ ನಿಗಾ ಇಡಬೇಕು. ಪರಿಹಾರ ಕೊಡಿಸುವಲ್ಲಿ ತನ್ನ ಕೈಯ್ಯಲ್ಲಿ ಆಗಿರುವಷ್ಟು ಮಾಡಿರುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭ ಸರಕಾರದಿಂದ ಪರಿಹಾರ ಕಲ್ಪಿಸುವಲ್ಲಿ ಅವಿರತ ಶ್ರಮಿಸಿದ ಮೊಯ್ದೀನ್ ಬಾವಾ ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.

ಎಚ್.ಯು. ಅನಂತಯ್ಯ, ಶ್ರೀರಂಗ ಎಚ್., ಟಿ.ಎನ್. ರಮೇಶ್, ಎಂ. ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article