Mangalore: ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮುಖಗಳಿಗೆ ಅವಕಾಶ
ಮಂಗಳೂರು: ದೇಶದಾದ್ಯಂತ 18ನೇ ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲಿಯೇ ಎಲ್ಲಾ ಪಕ್ಷಗಲ್ಲಿಯೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕಿಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಜಿದ್ದಾಜಿದ್ದಿನ ಹಣಾಹಣಿ ನಡೆಯಲು ಚುನಾವಣಾ ರಣರಂಗ ಸಿದ್ಧವಾಗುತ್ತಿವೆ.
ಕಾಂಗ್ರೆಸ್ ಪಕ್ಷಕ್ಕೆ ಹೊಸದಾಗಿ 2023ನೇ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸೇರ್ಪಡೆಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಯುವ ವಕೀಲ, ಶ್ರೀ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ, ಬಿಲ್ಲವ ಮುಖಂಡ ಪದ್ಮರಾಜ್ ಆರ್. ಅವರು ಈ ಬಾರಿ ಕಾಂಗ್ರೆಸ್‌ನಿಂದ ಕಣಕಿಳಿಯುತ್ತಿದ್ದಾರೆ.
ಬಿಜೆಪಿಯಿಂದ ಈ ಬಾರಿ ನಿವೃತ್ತ ಸೈನಿಕ, ಬಂಟರ ಸಮುದಾಯದ ನಾಯಕ, ಬಿಜೆಪಿಯಲ್ಲಿ ಅನೇಕ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಿಜೆಪಿಯಿಂದ ಕಣಕಿಳಿಯಲಿದ್ದಾರೆ.
ಬಿಜೆಪಿಯಿಂದ ದೇಶಭಕ್ತಿ, ಹಿಂದುತ್ವದ ನೆಲೆಯಲ್ಲಿ ಚುನಾವಣೆ ಎದುರಿಸಲು ಕಾರ್ಯತಂತ್ರ ರೂಪಿಸಿದ್ದು, ಈಗಾಗಲೇ ಬ್ರಿಜೇಶ್ ಚೌಟ ಅವರು ದೇವಸ್ಥಾನಗಳು, ಮಠಗಳಿಗೆ ಭೇಟಿ ನೀಡಿ ಆರ್ಶೀವಾದ ಪಡೆದು, ಎಲ್ಲಾ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಚುನಾವಣೆ ಎದುರಿಸಲು ಸಂಘಟಿತರಾಗುವಂತೆ ಸಭೆಗಳನ್ನು ನಡೆಸುತ್ತಿದ್ದು, ಪ್ರಚಾರದ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಇವರು ಈಗಾಗಲೇ ಹಿಂದುತ್ವದ ಪರವಾಗಿ ಹೋಗುತ್ತಿದ್ದು, ಯುವಜನತೆ, ಹಾಗೂ ಹಿಂದೂ ಸಮುದಾಯದವರು ಮತ ನೀಡುವ ವಿಶ್ವಾಸದಲ್ಲಿ ಮುನ್ನಡೆಯುತ್ತಿದ್ದಾರೆ.
ಕಾಂಗ್ರೆಸ್‌ನಿಂದ ಪದ್ಮರಾಜ್ ಆರ್. ಅವರು ಸಮಾಜಪರ ಕಾಳಜಿ, ಸರ್ವಧರ್ಮವನ್ನು ಸಮಾನವಾಗಿ ಮುನ್ನಡೆಸುವ ಯೋಜನೆಯೊಂದಿಗೆ ಮತ ಯಾಚನೆಗೆ ಮುಂದಾಗಿದ್ದು, ಪ್ರತೀ ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಹಿರಿಯ ನಾಯಕರುಗಳನ್ನು ಭೇಟಿಯಾಗಿ ಆರ್ಶೀವಾದ ಪಡೆದು, ಚುನಾವಣೆ ಎದುರಿಸಲು ಮುಂದಾಗಿದ್ದು, ಕಾಂಗ್ರೆಸ್‌ನ ಜನಪರ ಯೋಜನೆಗಳು, ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಬಿಲ್ಲವ-ಬಂಟ ಸಮುದಾಯದ ನಾಯಕರುಗಳು ಚುನಾವಣೆಯನ್ನು ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಅತಿಹೆಚ್ಚು ಜನಸಂಖ್ಯೆ ಇರುವ ಬಿಲ್ಲವರು ತಮ್ಮ ಜಾತಿಯ ನಾಯಕರ ಕೈ ಹಿಡಿಯುತ್ತಾರೋ ಅಥವಾ ಎರಡನೇ ಸ್ಥಾನದಲ್ಲಿರುವ ಬಂಟ ಸಮುದಾಯದ ನಾಯಕನ ಕೈ ಹಿಡಿಯುತ್ತಾರೋ ಎಂಬ ಕುತೂಹಲ ಜನತೆಯಲ್ಲಿ ಮನೆ ಮಾಡಿದ್ದು, ಬಂಟ ಸಮುದಾಯದವರ ಗಮನ ಯಾವಕಡೆಗೆ ಕೇಂದ್ರವಾಗಿದೆ ಎಂಬುವುದನ್ನು ಕಾದುನೋಡಬೇಕಿದೆ.
ಕಳೆದ 35 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡು ಬರುತ್ತಿದ್ದು, ಈ ಬಾರಿ ಕಾಂಗ್ರೆಸ್‌ನಲ್ಲಿ ಹೊಸ ಮುಖಕ್ಕೆ ಮಣ ಹಾಕಿದ್ದು, ಈ ಬಾರಿ ಜನತೆ ಕಾಂಗ್ರೆಸ್‌ನ ಅಥವಾ ಮತ್ತೆ ಬಿಜೆಪಿಯ ಕೈ ಹಿಡುವುವರೋ ಎಂಬ ಕುತೂಹಲ ಮೂಡಿದೆ.
"ಈ ಬಾರಿ ಜಿಲ್ಲೆಯಲ್ಲಿ ಒಟ್ಟು 17,96,826 ಮಂದಿ ಮತದಾರರಿದ್ದು, ಇದರಲ್ಲಿ 8,77,438 ಪುರುಷ, 9,19,321 ಮಂದಿ ಮುಹಿಳಾ ಹಾಗೂ 67 ಮಂದಿ ತೃತೀಯ ಲಿಂಗಿ ಮತದಾರರು ಇದ್ದು, ಈ ಬಾರಿ ಜಿಲ್ಲೆಯಲ್ಲಿ ಮಹಿಳಾ ಮತದಾರರು ಹೆಚ್ಚಾಗಿದ್ದು, ಮಹಿಳೆಯರು ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಲಿಗೆ ಮತ ಹಾಕುತ್ತಾರೋ ಅಥವಾ ಬಿಜೆಪಿಯ ಹಿಂದುತ್ವದೊಂದಿಗೆ ಮತ್ತೊಮ್ಮೆ ಮೋದಿ ಎಂದು ಬಿಜೆಪಿಯನ್ನು ಬೆಂಬಲಿಸುತ್ತಾರೋ ಎಂಬುವುದಕ್ಕೆ ಜೂನ್ 4 ರಂದು ಉತ್ತರ ಸಿಗಲಿದೆ."