Mangalore: ದ.ಕ. ಜಿಲ್ಲಾ ಎಎಪಿ ಘಟಕದಿಂದ ಪ್ರತಿಭಟನೆ
Sunday, March 24, 2024
ಮಂಗಳೂರು: ದೆಹಲಿ ಮುಖ್ಯಮಂತ್ರಿ ಹಾಗು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲರ ಬಂಧನವನ್ನು ಖಂಡಿಸಿ ಎಎಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಾ.23ರಂದು ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜಿಲ್ಲಾ ಉಸ್ತುವಾರಿ ವಿವೇಕಾನಂದ ಸಾಲಿನ್ಸ್, ಜಿಲ್ಲಾಧ್ಯಕ್ಷ ವಿಶು ಕುಮಾರ್, ರಾಜ್ಯ ಹಿಂದುಳಿದ ಘಟಕದ ಅಧ್ಯಕ್ಷ ನವಿನಚಂದ್ರ ಪೂಜಾರಿ, ಮಾಜಿ ಜಿಲ್ಲಾಧ್ಯಕ್ಷ ಅಶೋಕ್ ಅಡಮಲೆ, ಮಾಜಿ ಕಾರ್ಯದರ್ಶಿ ಫ್ಲೋರಿನ್ ಗೋವಿಯಸ್, ಸಂಘಟನಾ ಕಾರ್ಯದರ್ಶಿ ಶಾನನ್ ಪಿಂಟೋ, ಕಾರ್ಯದರ್ಶಿಗಳಾದ ಸೀಮಾ ಮಡಿವಾಳ್, ತೋಮಸ್ ಮತ್ತಿತರರು ಉಪಸ್ಥಿತರಿದ್ದರು.