Mangalore: ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರನ್ನು ಗೆಲ್ಲಿಸಲು ಮೋದಿ ಕರೆ

Mangalore: ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರನ್ನು ಗೆಲ್ಲಿಸಲು ಮೋದಿ ಕರೆ


ಮಂಗಳೂರು: ಏಪ್ರಿಲ್ 26 ರಂದು ನಡೆಯಲಿರುವ ದಕ್ಷಿಣ ಕನ್ನಡ ಕ್ಷೇತ್ರದ ನಮ್ಮ ಅಭ್ಯರ್ಥಿಯಾದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಭಾರೀ ಅಂತರದಿಂದ ಗೆಲ್ಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದರು.

ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ರ‍್ಯಾಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನುದ್ದೇಶಿಸಿ ಮಾತನಾಡಿದರು. 

ಅಪಾರ ಸಂಖ್ಯೆಯಲ್ಲಿ ನೆರೆದಿರುವ ಈ ಜನರ ಉತ್ಸಾಹಭರಿತ ದೃಶ್ಯ ನೋಡುತ್ತಿದ್ದರೆ, ಇಡೀ ಮೈದಾನದಲ್ಲಿ ಶಕ್ತಿ ಸಿಂಚನಗೊಂಡು ಹರಿದಾಡುತ್ತಿದೆಯೇನೋ ಅನಿಸುತ್ತಿದೆ. ಈ ಜನೋತ್ಸಾಹವು ಮತ್ತೊಂದು ಕಡೆಗೆ ಒಗ್ಗೂಡಿರುವ ಭ್ರಷ್ಟಾಚಾರ ಮತ್ತು ಜಾತಿ ತುಷ್ಟೀಕರಣದಲ್ಲಿ ಮುಳುಗಿರುವ ಇಂಡಿ ಅಲಯನ್ಸ್‌ನ ನೆಮ್ಮದಿ, ನಿದ್ದೆ ಹಾರಿಹೋಗಿದೆ ಎಂದರು. 

ಶಿವಮೊಗ್ಗದ ಜನರನ್ನು ಪ್ರಶಂಶಿಸಿ, ಒಂದು ಕಾಲದಲ್ಲಿ ನಾವು ಮತ್ತು ನಮ್ಮ ಪಕ್ಷವು ಅಷ್ಟೇನು ಸಾಧಿಸದ ಸಮಯದಲ್ಲಿ ನಮ್ಮ-ನಿಮ್ಮೆಲ್ಲರ ನಾಯಕ ಯಡ್ಯೂರಪ್ಪನವರು ತಮ್ಮ ಇಡೀ ಜೀವನವನ್ನೇ ಪಕ್ಷ ಸಂಘಟನೆಯಲ್ಲಿ ಕಳೆದಿದ್ದಾರೆ. ಇದು, ಇವರ ತಪೋಭೂಮಿ ಕೂಡ ಆಗಿದೆ. ಎಂದರು.

ಈ ಒಂದು ಕ್ಷೇತ್ರದ ಅಭ್ಯರ್ಥಿ ಸೇರಿದಂತೆ ಸಮಸ್ತ ಕರ್ನಾಟಕದ ಅಭ್ಯರ್ಥಿಗಳನ್ನು ಮೋದಿ ಅಭಿವೃದ್ಧಿಯ ರಾಯಭಾರಿಗಳನ್ನು ಚುನಾಯಿಸಿ ದಿಲ್ಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮೆಲ್ಲರದು. ಎಲ್ಲ 28 ಕ್ಷೇತ್ರಗಳನ್ನು ಬಿಜೆಪಿ ಬೆಂಬಲಿತ ಎನ್.ಡಿ.ಎ. ಒಕ್ಕೂಟಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮತನೀಡಿ ಗೆಲ್ಲಿಸುವಂತೆ ತಮ್ಮಲ್ಲಿ ಪ್ರಾರ್ಥಿಸಲು ಇಂದು ಇಲ್ಲಿಗೆ ಬಂದಿದ್ದೇನೆ ಎಂದರು. 

ಏಪ್ರಿಲ್ 26 ಮತ್ತು ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮಗಳ ಭಾಗಿದಾರಿಕೆಯಿಂದ ದೇಶದ ನವಯುವಕರಿಗೆ ಹೊಸ ದಿಕ್ಸೂಚಿ ದೊರಕಲಿದೆ ಎಂದು ಹೇಳಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article