Mangalore: ಆತ್ಮ ವಿಶ್ವಾಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಅಗತ್ಯ

Mangalore: ಆತ್ಮ ವಿಶ್ವಾಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಅಗತ್ಯ


ಮಂಗಳೂರು: ಉದ್ಯೋಗಾಕಾಂಕ್ಷಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಅದರ ಜೊತೆಗೆ ವಿವಿಧ ಮೂಲಗಳಿಂದ ಜ್ಞಾನ ಸಂಪಾದನೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣವಾದ ತಯಾರಿಯನ್ನು ನಡೆಸಿದ್ದಲ್ಲಿ ಯಶಸ್ಸು ಖಂಡಿತ ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿನಿ, ಇನ್ಫೋಸಿಸ್‌ನ ಯೋಜನಾ ವ್ಯವಸ್ಥಾಪಕಿ ಕರೀಷ್ಮಾ ಕೆ.ಜಿ. ಹೇಳಿದರು.

ಅವರು ಮಾ.20 ರಂದು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ 2024ರ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. 

ಡಬ್ಲ್ಯೂಎನ್.ಇ.ಎಸ್.ನ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಸಂಸ್ಥೆಯ ಸಂಚಾಲಕಿ ಹಾಗೂ ಡಬ್ಲ್ಯೂಎನ್.ಇ.ಎಸ್. ಉಪಾಧ್ಯಕ್ಷೆ ಡಾ. ಮಂಜುಳಾ ಕೆ.ಟಿ. ಬೆಸೆಂಟ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ರಾಜಶೇಖರ್ ಹೆಬ್ಬಾರ್, ಪ್ರಾಚಾರ್ಯ ಡಾ. ಪ್ರವೀಣ್ ಕುಮಾರ್ ಕೆ.ಸಿ., ಉದ್ಯೋಗ ನಿಯೋಜನೆ ವಿಭಾಗದ ಸಂಚಾಲಕಿ ಪ್ರೊ. ವಿದ್ಯಾ ಗಣೇಶ್ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರೀಮ್ ನಿರೂಪಿಸಿ, ಅಲ್ಸಿಫಾ ಸ್ವಾಗತಿಸಿ, ಪ್ರತೀಕ್ಷಾ ವಂದಿಸಿದರು. ಸಂಘದ ಸದಸ್ಯರುಗಳಾದ ಪ್ರೊ. ಅನುಪಾ ಬಾಳಿಗ, ಪ್ರೊ. ಇಂದಿರಾ ಬಾದ್ಯ, ವಿದ್ಯಾರ್ಥಿ ಸಂಘದ ನಾಯಕಿ ಶ್ರೇಯ ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article