Moodubidire: ಮೂಡುಬಿದಿರೆಗೆ ಆಗಮಿಸಿದ ಮತದಾನ ಜಾಗೃತಿ ಜಾಥಾ ರಥ

Moodubidire: ಮೂಡುಬಿದಿರೆಗೆ ಆಗಮಿಸಿದ ಮತದಾನ ಜಾಗೃತಿ ಜಾಥಾ ರಥ


ಮೂಡುಬಿದಿರೆ: ಏ.26 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ- 2024 ರ ಪ್ರಯುಕ್ತ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ  ಮತದಾನ‌ ಜಾಗೃತಿ ಜಾಥಾ ರಥವು ಶನಿವಾರ ಮೂಡುಬಿದಿರೆ ತಾಲೂಕು ಪಂಚಾಯತ್ ಗೆ  ಆಗಮಿಸಿತು. 

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್. ವೆಂಕಟಚಲಪತಿ ಜಾಗೃತಿ ರಥವನ್ನು  ಸ್ವಾಗತಿಸಿದರು. 

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯರು, ಶಿಕ್ಷಕರು ಹಾಜರಿದ್ದರು.

ನಂತರ ಮತದಾನ ಜಾಗೃತಿ ರಥವು ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಬಸ್ ಸ್ಟಾಂಡ್, ಮಾರುಕಟ್ಟೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಂಡಿತು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article