Mulki: ಕೈಚೀಲಗಳ ಅನಾವರಣ
Sunday, March 31, 2024
ಮೂಲ್ಕಿ: ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿ ಲೋಕಸಭಾ ಅಭ್ಯರ್ಥಿ ಕ್ಯಾ. ಬಿಜೇಶ್ ಚೌಟ, ಮೂಲ್ಕಿ ಮೂಡುಬಿದ್ರೆ ಶಾಸಕ ಉಮನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮೂಲ್ಕಿ ಸುಧಾಮ ಫೌಂಡೇಶನ್ ಅವರ ಪರಿಸರ ಸ್ನೇಹಿ ಉತ್ಪನ್ನದ ವಿವಿಧ ಬಗೆಯ ಕೈಚೀಲ ಮಳಿಗೆಗೆ ಭೇಟಿ ನೀಡಿ ಕೈಚೀಲವನ್ನು ಅನಾವರಣಗೊಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಸುನಿಲ್ ಆಳ್ವ, ಮೂಲ್ಕಿ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸತೀಶ್ ಅಂಚನ್, ಮೂಲ್ಕಿ ನ.ಪಂ. ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ, ಬಿಜೆಪಿ ನಾಯಕ ರಂಗನಾಥ ಶೆಟ್ಟಿ, ದೇವಪ್ರಸಾದ್ ಕೆಂಪುಗುಡ್ಡೆ, ಸಂಸ್ಥೆಯ ಕಾರ್ಯದರ್ಶಿ ಶೈಲೇಶ್ ಕುಮಾರ್, ಸಂಸ್ಥೆಯ ಪ್ರಮುಖರಾದ ವಿಠಲ ಎನ್.ಎಂ., ವಿನೋದ್ ಸಾಲ್ಯಾನ್, ಅಶೋಕ್ ಜನನಿ, ಪುರುಷೋತ್ತಮ್ ರಾವ್, ಮತ್ತು ಮಳಿಗೆ ವ್ಯವಸ್ಥಾಪಕರಾದ ಸನ್ನಿತ ಮೋಹನ್, ರಾಜೇಶ್ ಸುವರ್ಣ ಉಪಸ್ಥಿತರಿದ್ದರು.