Bantwal: ಕಾಂಗ್ರೆಸ್‌ನ ಬಿ.ಸಿ. ರೋಡ್‌ನಲ್ಲಿ ರೋಡ್ ಶೋ

Bantwal: ಕಾಂಗ್ರೆಸ್‌ನ ಬಿ.ಸಿ. ರೋಡ್‌ನಲ್ಲಿ ರೋಡ್ ಶೋ


ಬಂಟ್ವಾಳ: ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರು ಗುರುವಾರ ಸಂಜೆ ಬಿ.ಸಿ.ರೋಡು ನಗರದಲ್ಲಿ ರೋಡ್ ಶೋ ಮೂಲಕ  ಮತಯಾಚನೆಗೈದರು.

ಬಿ.ಸಿ.ರೋಡಿನ ಕೈಕಂಬದಿಂದ ತೆರೆದ ವಾಹನದಲ್ಲಿ ಹೊರಟ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರ ರೋಡ್ ಶೋ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಸಂಪನ್ನಗೊಂಡಿತು. 

ಬಳಿಕ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕರಿಗೆ ಅಭಿವೃದ್ಧಿ ಪರವಾದ ವಿಚಾರಗಳೇ ಇಲ್ಲವಾಗಿದ್ದು, ಇದೀಗ ಅಪಪ್ರಚಾರ, ಸಂಘರ್ಷದ ವಾತಾವರಣ ಸೃಷ್ಠಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ವಿಚಲಿತರಾಗದೆ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.

ಪದ್ಮರಾಜ್ ಕೂಡಾ ಓರ್ವ ಹಿಂದೂವಾಗಿದ್ದು, ಎಲ್ಲರನ್ನೂ ಪ್ರೀತಿಸುವ, ಸೌಹಾರ್ದತೆ, ಪರಸ್ಪರ ಜೋಡಿಸುವ ಹಿಂದೂವಾಗಿದ್ದೇನೆಯೇ ಹೊರತು ಜನರನ್ನು ವಿಭಜಿಸುವ ಹಿಂದೂವಲ್ಲ ಎಂದ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಗತವೈಭವ ಮರುಕಳಿಸಲು ಗೆಲುವು ಅನಿವಾರ್ಯವಾಗಿದೆ ಎಂದರು. 

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಸಂಸದರಿದ್ದ ಕಾಲದಲ್ಲಿ ಜಿಲ್ಲೆ ಅಭಿವೃದ್ಧಿಯನ್ನು ಕಂಡಿತ್ತು. ಕಾಂಗ್ರೆಸ್ ಪಕ್ಷ ಕ್ರಿಯಾಶೀಲ, ಸಮರ್ಥ ಅಭ್ಯರ್ಥಿಯಾದ ಪದ್ಮರಾಜ್ ಅವರನ್ನು ಕಣಕ್ಕಿಳಿಸಿದ್ದು, ಅವರನ್ನು ಗಲ್ಲಿಸಿದರೆ ಲೋಕಸಭೆಯಲ್ಲಿ ಜನರ ಧ್ವನಿಯಾಗಿ ಕೆಲಸಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ವಿ.ಪ.ಸದಸ್ಯ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ, ವಕೀಲ ಅಶ್ವನಿ ಕುಮಾರ್ ರೈ,ಜಿ.ಪಂ.ಮಾಜಿ ಸದಸ್ಯರಾಸ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,  ಎಂ.ಎಸ್.ಮಹಮ್ಮದ್,ಬಂಟ್ಚಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಕ್ಷದ ಮುಖಂಡರಾದ ಸುದರ್ಶನ್ ಜೈನ್, ಕೆ.ಪದ್ಮನಾಭ ರೈ, ಸಂಜೀವ ಪೂಜಾರಿ ಬೊಳ್ಳಾಯಿ, ಅಬ್ಬಾಸ್ ಆಲಿ,ಸದಾಶಿವ ಬಂಗೇರ,ಮಹಮ್ಮದ್ ನಂದಾವರ,ಪದ್ಮನಾಭ ರೈ, ಜಯಂತಿ ವಿ.ಪೂಜಾರಿ,ಜೋಸ್ಪಿನ್ ಡಿಸೋಜ,ಅನ್ವರ್ ಕರೋಪಾಡಿ,ಮೋಹನ್ ಗೌಡ ಕಲ್ಮಂಜ,ಸುರೇಶ್ ಕುಲಾಲ್ ನಾವೂರು,ಜಗದೀಶ್ ಕೊಯಿಲ, ನಾರಾಯಣ ನಾಯ್ಕ್,ಮಹಮ್ಮದ್ ಶರೀಫ್  ಜನಾರ್ಧ ಚಂಡ್ತಿಮಾರ್ ಮತ್ತಿತರರಿದ್ದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ,ಸ್ವಾಗತಿಸಿದರು.ಪಾಣೆಂಮಗಳೂ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ವಂದಿಸಿದರು. ಇದಕ್ಕು ಮೊದಲು ಬಂಟ್ವಾಳ ಕ್ಷೇತ್ರದ ವಿವಿಧೆಡೆಯಲ್ಲಿ ಮತಯಾಚನೆಗೈದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article