Mangalore: ಹೃದಯ ಸ್ತಂಬನ ಕುರಿತಾದ ತುರ್ತು ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ
Saturday, April 20, 2024
ಮಂಗಳೂರು: ಇಲ್ಲಿಯ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮೇಶ್ವರದ ಕೆ.ಪಿ. ಬಲ್ಲಾಳ್ ನರ್ಸಿಂಗ್ ಇನ್ಸ್ಟಿಟ್ಯೂಟ್ ಕಾಲೇಜಿನ ರಾಷ್ಟ್ರೀಯ ಯೋಜನೆ ವಾರ್ಷಿಕ ಶಿಬಿರದ ಪ್ರಯುಕ್ತ ಕಾಲೇಜಿನ ರೇಂಜರ್ ರೋವರ್ ಘಟಕದ ಸಹಯೋಗದಲ್ಲಿ ಒಂದು ದಿನದ ಹೃದಯ ಸ್ತಂಬನದಿಂದ ರಕ್ಷಿಸಿಕೊಳ್ಳುವ ಬಗ್ಗೆ ತರಬೇತಿ ಶಿಬಿರ ಕಾರ್ಯಕ್ರಮವನ್ನು ಕಾಲೇಜಿನ ರೋವರ್ ರೇಂಜರ್ ವಿದ್ಯಾರ್ಥಿಗಳಿಗೆ ಎ.17 ರಂದು ಪ್ರಾತ್ಯಕ್ಷಿತೆ ಮೂಲಕ ಪ್ರಥಮ ಚಿಕಿತ್ಸಾ ವಿಧಾನವನ್ನು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಮ್, ರೋವರ್ ಲೀಡರ್ ಡಾ. ಪುರುಷೋತ್ತಮ ಭಟ್, ರೇಂಜರ್ ಲೀಡರ್ ಡಾ. ಅಪರ್ಣ ಆಳ್ವ ಎನ್., ಕೆ.ಪಿ. ಬಲ್ಲಾಳ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸೋನಿಯಾ ಸೆಬೆಸ್ಟೀನಿಯಾ, ರಾಷ್ಟ್ರೀಯ ಯೋಜನೆ ಘಟಕ ಸಂಯೋಜಕರುಗಳಾದ ಪ್ರೊ. ಪದ್ಮಾವತಿ, ಪ್ರೊ. ಸುಜಯ ಮತ್ತು ಪ್ರೊ ಮಂಜುಷಾ ಉಪಸ್ಥಿತರಿದ್ದರು. ಡಾ. ಪುರುಷೋತ್ತಮ ಭಟ್ ಸ್ವಾಗತಿಸಿ, ಡಾ. ಅಪರ್ಣ ಆಳ್ವ ಎನ್. ವಂದಿಸಿದರು.


