Mangalore: ತೈಲಚಿತ್ರ ಬರಹಗಾರ ಕಿರಣ್ ಅವರಿಗೆ ಸನ್ಮಾನ
Saturday, April 20, 2024
ಮಂಗಳೂರು: ಮಂಗಳೂರಿನಲ್ಲಿ ಎ.14ರಂದು ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋದಲ್ಲಿ ಮೋದಿ ಅವರ ತೈಲಚಿತ್ರ ಬಿಡಿಸಿ ಪ್ರಧಾನಿಗೆ ಅರ್ಪಿಸಿದ ತೊಕ್ಕೊಟ್ಟಿನ ಕಲಾವಿದ ಕಿರಣ್ ಅವರನ್ನು ಶುಕ್ರವಾರ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಶಾಲು ಹೊದೆಸಿ ಸನ್ಮಾನಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಸಾಮಾಜಿಕ ಜಾಲತಾಣದ ಸಂಚಾಲಕ ಧೀರೇಶ್ ಉಪಸ್ಥಿತರಿದ್ದರು.
