Mangalore: ಕಾಮತ್ ಅವರಿಂದ ಬಿ.ವೈ. ರಾಘವೇಂದ್ರ ಪರ ಮತಯಾಚನೆ
Tuesday, April 30, 2024
ಮಂಗಳೂರು/ಶಿವಮೊಗ್ಗ: ಮಂಗಳೂರು ನಗರ ದಕ್ಷಿಣದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪುಂದ, ಶಿರೂರು, ನಾಯ್ಕನಕಟ್ಟೆ ಮುಂತಾದ ಕಡೆಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಬಿರುಸಿನ ಮತಯಾಚನೆ ನಡೆಸಿದರು.
ಈ ವೇಳೆ ಕುಂದಾಪ್ರ ಕನ್ನಡ ಶೈಲಿಯಲ್ಲಿಯೇ ಮಾತನಾಡುತ್ತಾ ಸ್ಥಳೀಯರೊಂದಿಗೆ ಬೆರೆತ ಶಾಸಕರು, ಭಾರತವೀಗ ವಿಕಸಿತ ಹಾದಿಯಲ್ಲಿದ್ದು ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗಲು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳವುದರ ಜೊತೆಗೆ ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಇಡೀ ಕ್ಷೇತ್ರದಲ್ಲಿ ಮತ ಪ್ರಮಾಣ ಜಾಸ್ತಿಯಾಗುವಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವ ಜನತೆ ಅದರಲ್ಲೂ ವಿಶೇಷವಾಗಿ ಮೊದಲ ಬಾರಿ ಮತ ಚಲಾಯಿಸುತ್ತಿರುವವರು ಮೋದಿಯವರಿಗೇ ತಮ್ಮ ಮತ ಎಂದು ನಿರ್ಧರಿಸಿರುವುದು ದೇಶಕ್ಕೆ ಸಿಕ್ಕಿರುವ ಭರವಸೆಯ ನಾಯಕತ್ವಕ್ಕೆ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ರಮೇಶ್ ಹೆಗ್ಡೆ, ವಿಜಯ್ ಕುಮಾರ್ ಶೆಟ್ಟಿ, ರಾಜೇಶ್ ಪೈ, ಸದಾನಂದ ಪ್ರಭು, ಗಣೇಶ್ ಪ್ರಭು, ಪ್ರಕಾಶ್ ಪ್ರಭು, ನಾರಾಯಣ ಶಾನುಭಾಗ್, ಶ್ರೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.


