Dharmastala: ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ
Sunday, April 21, 2024
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಎ.21 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ, ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಜಿನ ಬಾಲಕನನ್ನು ಮೆರವಣಿಗೆಯಲ್ಲಿ ಚಂದ್ರ ಶಾಲೆಗೆ ಕರೆತಂದು ಪುಟಾಣಿ ಮಕ್ಕಳಿಂದ ಜನ್ಮಾಭಿಷೇಕ, ಅಷ್ಟವಿದಾರ್ಚನೆ, ಗೀತಾ-ನೃತ್ಯ ನೆರವೇರಿತು ಮಹಾವೀರ ಸ್ವಾಮಿಯ ನಾಮಕರಣ ಮಹೋತ್ಸವವನ್ನು ಹೇಮಾವತಿ ಹೆಗ್ಗಡೆ ಅವರು ಮತ್ತು ಕುಟುಂಬದ ಸದಸ್ಯರ ಮಾರ್ಗದರ್ಶನದಲ್ಲಿ ಊರಿನ ಶ್ರಾವಕ ಶ್ರಾವಕಿಯರು ನೆರವೇರಿಸಿದರು.

