Sakaleshapura: ನಗುಮುಖದ ಯುವ ನಾಯಕಿ ಸರೋಜಾ
ಸಕಲೇಶಪುರ: ಯಾವಾಗಲೂ ಮುಖದಲ್ಲಿ ನಗು. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಯಾವಾಗಲೂ ಎಲ್ಲರೊಂದಿಗೂ ಬೆರೆಯುವ ಯುವ ನಾಯಕಿ ಸಕಲೇಶಪುರ ತಾಲೂಕಿನ ಉಚ್ಚಂಗಿ ಗ್ರಾಮ ಮಂಚಾಯತ್‌ನ ಅಧ್ಯಕ್ಷರಾದ ಸರೋಜಾ.
1980 ಅಕ್ಟೋಬರ್ 10 ರಂದು ಸಕಲೇಶಪುರ ತಾಲೂಕಿನ ಹದಲ್‌ಕೆರೆ ಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು 2001 ರಲ್ಲಿ ವಿವಾಹವಾಗಿ ಪುಟ್ಟ ಸಂಸಾರವನ್ನು ಪ್ರಾರಂಭಿಸಿ, 2023 ರಲ್ಲಿ ಪ್ರಥಮ ಬಾರಿಗೆ ಜೆಡಿಎಸ್ ಮೂಲಕ ರಾಜಕೀಯಕ್ಕೆ ಪಾದರ್ಪಣೆ ಮಾಡುವ ಮೂಲಕ ಜನಸೇವೆಗೆ ಮುಂದಾಗಿದ್ದಾರೆ.
ಅಧ್ಯಕ್ಷೆ ಎಂಬುವ ಆಹಂಕಾರವಿಲ್ಲದೆ, ಪಂಚಾಯತ್ ಮೆಂಬರ್ ಎಂಬುವ ಹುಮ್ಮಸ್ಸು ಇಲ್ಲದೆ ಸಮನ್ಯರಲ್ಲಿ ಸಾಮಾನ್ಯರಂತೆ ಎಲ್ಲಕರೊಂದಿಗೆ ಬೆರೆತು ಸಧಾ ಕೆಲಸ ಮಾಡಲು ಹಾತೊರೆಯುವ ವ್ಯಕ್ತಿತ್ವ. ಸಿಕ್ಕಿದವರೆಲ್ಲರನ್ನು ಕರೆದು ಮಾತನಾಡಿಸುವ, ಉಚ್ಚಂಗಿ ಗ್ರಾಮ ಪಂಚಾಯತ್‌ನ್ನು ಕಳೆದ ಒಂದು ವರ್ಷದಿಂದ ಯಶಸ್ವಿಯಾಆಗಿ ಯಾವುದೇ ಗಲಾಟೆ-ಗದ್ದಲಗಳು ನಡೆಯದಂತೆ ಎಲ್ಲರನ್ನೂ ತನ್ನೊಂದಿಗೆ ಕರೆದೊಯ್ಯುತ್ತಿರುವವರು ಯುವ ನಾಯಕಿ ಸರೋಜಾ ಅವರು.
ಬಾಲ್ಯದಿಂದಲೂ ಎಲ್ಲರೊಂದಿಗೆ ಬೆರೆಯುವ, ಸಹಜವಾಗಿಯೇ ಮಾತನಾಡುವ, ಸಹಾಯ ಮನೋಭಾವ, ಎಲ್ಲದಕ್ಕೂ ಸ್ಪಂಧಿಸುವ ಅಧ್ಯಕ್ಷರು ಯಾವಾಗಲೂ ಚಲನಶೀಲರು. ಇವರ ಕಾರ್ಯಗಳನ್ನು ಗಮನಿಸಿದ ಗ್ರಾಮದವರು ಇವರನ್ನು ಆಯ್ಕೆ ಮಾಡಿದ್ದು, ಮೊದಲ ಬಾರಿಯೇ ಅಧ್ಯಕ್ಷರಾಗಿ ಜನಸೇವೆಗೆ ಅವಕಾಶದೊರೆತಂತಾಗಿದೆ.
ಪತಿ ವೆಂಕಟೇಶ್ ಹಾಗೂ ಮಕ್ಕಳಾದ ರಕ್ಷಿತ್ ಹಾಗೂ ಕೃತಿಕ್ ಅವರ ಬೆಂಬಲದೊಂದಿಗೆ ಸಧಾ ಬೆನ್ನೆಲುಬಾಗಿ ನಿಂತು ಎಲ್ಲಾ ಕೆಲಸಗಳಿಗೂ ಪ್ರೋತಾಹಿಸುತ್ತಿರುವ ಅವರ ಪತಿ ವೆಂಕಟೇಶ್ ಅವರ ತ್ಯಾಗದಿಂದ ಇಂದು ಈ ಯುವ ನಾಯಕಿ ಸರೋಜಾ ಅವರು ಜನರ ನೆಚ್ಚಿನ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
